Saint Mary's Syrian College Brahamavar hosts Inter-College Best physique Competition
In a spectacular display of strength and athleticism, the inter-college Best physique competition, hosted by SMS College Brahmavara in collaboration with the Department of Physical Education Mangalore University, unfolded on January 7, 2024.
Alvas College Moodubidire secured the first place, followed by SDM College and Aloysius College . The host institution, SMS College, held its ground and secured a respectable fourth place.
A standout performer, Kishan Shetty of Alvas College, was crowned the best bodybuilder of the competition, showcasing exemplary dedication and physical prowess.
The event, held in the college hall of SMS College Brahmavara, not only celebrated the spirit of competition but also highlighted the commitment and hard work of the participating colleges and individual athletes. Congratulations to all participants for making the inter-college bodybuilding competition a resounding success.
ಎಸ್ ಎಮ್. ಎಸ್ ಕಾಲೇಜು ಬ್ರಹ್ಮಾವರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ ದೇಹದಾಢ್ಯ ಸ್ಪರ್ಧೆಯು ದಿನಾಂಕ 07.012024 ರಂದು ಕಾಲೇಜಿನ ಬಿ.ವಿ.ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ್ ಉಡುಪರವರು ವಹಿಸಿದ್ದರು. ಕೆ.ಎಫ್.ಎ. ಸರ್ಟಿಫೈಡ್ ಫಿಟ್‌ನೆಸ್ ತರಬೇತುದಾರರಾದ ಶ್ರೀ ನಿತ್ಯಾನಂದ ಕೋಟ್ಯಾನ್ ಹಾಗೂ ಬ್ರಹ್ಮಾವರ ತಾಲೂಕು ಅತ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಭರತ್ ಕುಮಾರ್ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ.ಹರಿದಾಸ್ ಕೂಳೂರು, ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಶ್ರೀ ಆಲ್ವರಿಸ್ ಡಿಸಿಲ್ವ, ಸದಸ್ಯರಾದ ಶ್ರೀ ಆಲ್ಬರ್ಟ್ ರೋನಿ ಡಿಸಿಲ್ವ, ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ರೆಫ್ರಿಯಾಗಿರುವ ಶ್ರೀ ಪ್ರೇಮನಾಥ್ ಉಳ್ಳಾಲ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರೊ.ಅಲ್ವಿನ್ ಅಂದ್ರಾದೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ಇವರು ಗೌರವ ಉಪಸ್ಥಿತಿಯಲ್ಲಿದ್ದರು. ಉಪನ್ಯಾಸಕರಾದ ಶ್ರೀ ಭರತ್ ರಾಜ್ ನೇಜಾರ್ ಮತ್ತು ಶ್ರೀ ವಿಘ್ನೇಶ್ ಪಡಿಯಾರ್ ಸ್ವಾಗತಿಸಿ, ಶ್ರೀ ಅರುಣ್ ರಾಜ್ ಮತ್ತು ಶ್ರೀ ವೆಂಕಟೇಶ್ ಭಟ್ ರವರು ಧನ್ಯವಾದ ಸಮರ್ಪಿಸಿ, ಶ್ರೀ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕಾಲೇಜುಗಳ ಸುಮಾರು 50ಕ್ಕಿಂತಲೂ ಅಧಿಕ ದೇಹದಾಢ್ಯ ಪಟುಗಳು ಈ ಸ್ಪರ್ಧೆಯಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡು ಅಂತಿಮವಾಗಿ ಸ್ಪರ್ಧೆಯ ಸಮಗ್ರ ಪ್ರಶಸ್ತಿಯ 4 ನೇ ಸ್ಥಾನವನ್ನು ಆತಿಥೇಯ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ , 3 ನೇ ಸ್ಥಾನ ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು , ದ್ವಿತೀಯ ಸ್ಥಾನವನ್ನು ಎಸ್ ಡಿ ಎಂ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು ಮಂಗಳೂರು, ಹಾಗೂ ಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರಿ ಪಡೆದುಕೊಂಡವು . Mr. ಮಂಗಳೂರು ಯೂನಿವರ್ಸಿಟಿ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಮೂಡಬಿದಿರೆಯ ಕಿಶನ್ ಶೆಟ್ಟಿಯವರು ಸ್ಪರ್ಧೆಯ ಅತ್ಯುತ್ತಮ ದೇಹದಾಢ್ಯ ಪಟುವಾಗಿ ಹೊರಹೊಮ್ಮಿದರು .