⚡ Latest News ⚡

Upcoming Events : "🔥 🔴 Food Fest 🔥 Industrial Visits🔥 🔥 Orientation

Friday, November 10, 2023

ಎನ್.ಎಸ್.ಎಸ್. ಘಟಕ: "ಕಾನೂನು ಅರಿವು" ಕಾರ್ಯಾಗಾರ



ಎನ್.ಎಸ್.ಎಸ್. ಘಟಕಗಳ ವತಿಯಿಂದ "ಕಾನೂನು ಅರಿವು"

ಕಾರ್ಯಾಗಾರ




09/11/2023 ರ ಗುರುವಾರದಂದು ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2023-24 ರ ಸಾಲಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ "ಕಾನೂನು ಅರಿವು" ಮೂಡಿಸುವ ಕಾರ್ಯಕ್ರಮವನ್ನು ನಮ್ಮ ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ. ಇವರು ವಹಿಸಿಕೊಂಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ರಾಜಶೇಖರ್ ವಿ. ಪೋಲಿಸ್ ಉಪನಿರೀಕ್ಷಕರು ಬ್ರಹ್ಮಾವರ ಇವರು ಆಗಮಿಸಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶದಲ್ಲಿ ನಾಗರೀಕರಲ್ಲಿ ನೆರವು ಮೂಡಿಸುವ ಬಗ್ಗೆ ಹಾಗೂ ಕಾನೂನಿನ ಮಾರ್ಗದರ್ಶನ ಮತ್ತು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುವ ಬಗ್ಗೆ ಹಾಗೆಯೇ ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿಯಿಂದ ಇರಬೇಕು ಎನ್ನುವ ಅಮೂಲ್ಯವಾದ ಮಾಹಿತಿಯನ್ನು ಎಲ್ಲರಿಗೂ ತಿಳಿಸಿಕೊಟ್ಟರು.

 ಶ್ರೀಯುತ ವೆಂಕಟರಮಣ, ಹೆಡ್ ಕಾನ್ ಸ್ಟೇಬಲ್, ಎನ್.ಎಸ್.ಎಸ್. ಘಟಕಗಳ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ  ಹಾಗೂ ಶ್ರೀ ಪ್ರಸನ್ನ ಶೆಟ್ಟಿ  ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವೃಂದದವರು, ನಮ್ಮ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವರ್ಷದ ಎನ್.ಎಸ್.ಎಸ್.ಸ್ವಯಂ ಸೇವಕರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಆದರ್ಶ್, ಧನ್ಯವಾದವನ್ನು ವಿದ್ಯಾ ಹಾಗೂ ನಿರೂಪಣೆಯನ್ನು ಶ್ರೇಯಸ್ ಮತ್ತು ನಮೃತಾ ಇವರು ನೆರವೇರಿಸಿಕೊಟ್ಟರು.


No comments: