⚡ Latest News ⚡

Upcoming Events : "🔥 🔴I,III & V Semester exam 🔥 🔥 🔥 Orientation

Friday, November 21, 2025

ಏಡ್ಸ್ ಕುರಿತು ಜಾಗೃತಿ

 

ಎಸ್. ಎಮ್. ಎಸ್. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS), ಯುವ ರೆಡ್ ಕ್ರಾಸ್ (YRC) ಹಾಗೂ ರೆಡ್ ರಿಬ್ಬನ್ ಕ್ಲಬ್ (RRC) ಅವರ ಸಹಯೋಗದಲ್ಲಿ ಕಾಲೇಜಿನಲ್ಲಿ ಏಡ್ಸ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ HIV/ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬಲಪಡಿಸುವುದಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾoಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಇವರು ವಹಿಸಿದ್ದರು. ಅವರು ಯುವಕರಲ್ಲಿ ಏಡ್ಸ ಬಗ್ಗೆ ಸರಿಯಾದ ಅರಿವು ಮೂಡಿಸುವ ಅಗತ್ಯವನ್ನು ಮನವರಿಕೆ ಮಾಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಜರಾದ ಶ್ರೀ ಅಲಂದೂರು ಮಂಜುನಾಥ್, ಹಿರಿಯ ಮೇಲ್ವಿಚಾರಕ, ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಹ್ಮಾವರ,ಇವರು ವಿದ್ಯಾರ್ಥಿಗಳಿಗೆ HIV ಹರಡುವ ಮಾರ್ಗಗಳು, ತಡೆಗಟ್ಟುವ ವಿಧಾನಗಳು, ಶೀಘ್ರ ಪರೀಕ್ಷೆ ಮತ್ತು ಸಲಹೆ ಪಡೆಯುವ ಮಹತ್ವ ಇತ್ಯಾದಿಗಳ ಬಗ್ಗೆ ವಿವರವಾಗಿ ಮಾತನಾಡಿದರು. ಅವರ ಸಂವಾದಾತ್ಮಕ ಉಪನ್ಯಾಸವು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕುತೂಹಲ ಹಾಗೂ ಅರಿವು ಮೂಡಿಸಿತು.ಕಾರ್ಯಕ್ರಮವನ್ನು NSS ಯೋಜನಾಾಧಿಕಾರಿಗಳಾದ ಶ್ರೀ ಪ್ರಸನ್ನ ಶೆಟ್ಟಿ ಮತ್ತು ಶ್ರೀ ಪ್ರಕಾಶ್ ಅವರು ಪರಿಣಾಮಕಾರಿಯಾಗಿ ಸಂಯೋಜಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ದಿವ್ಯಾ ಜ್ಯೋತಿ ಸುಗಮವಾಗಿ ನಿರ್ವಹಿಸಿದರು.ಕಾರ್ಯಕ್ರಮದ ಅಂತ್ಯದಲ್ಲಿ ಶ್ರೇಯಸ್ ಅವರು ಕೃತಜ್ಞತಾಪೂರ್ವಕ ವಂದನೆಯನ್ನು ಸಲ್ಲಿಸಿ, ಮುಖ್ಯ ಅತಿಥಿಗಳು, ಅಧ್ಯಕ್ಷರು, ವಿದ್ಯಾರ್ಥಿಗಳು ಮತ್ತು ಎಲ್ಲಾ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಹೇಳಿದರು.

No comments: