ಸತತ ಎರಡನೇ ಬಾರಿಗೆ ಬಿ.ಸಿ ಆಳ್ವ ಮೆಮೋರಿಯಲ್ ರೋಲಿಂಗ್ ಟ್ರೋಫಿ ಎಸ್ ಎಂ ಎಸ್ ಮಡಿಲಿಗೆ
ಬ್ರಹ್ಮಾವರ ಎಸ್.ಎಮ್.ಎಸ್ ಕಾಲೇಜು ಮೈದಾನದಲ್ಲಿ ಬಿ.ಸಿ ಆಳ್ವ ಮೆಮೋರಿಯಲ್ ರೋಲಿಂಗ್ ಟ್ರೋಫಿಗಾಗಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ವಲಯ ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್.ಎಂ.ಎಸ್ ಪದವಿ ಕಾಲೇಜು ಬ್ರಹ್ಮಾವರವು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಬಿ.ಸಿ ಆಳ್ವ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ತಂಡವು ಅತಿಥೇಯ ಎಸ್.ಎಂ.ಎಸ್ ತಂಡಕ್ಕೆ 141 ರನ್ನುಗಳ ಗುರಿಯನ್ನ ನೀಡಿತು .ಎಸ್.ಎಂ.ಎಸ್ ಕಾಲೇಜು ತಂಡ ಕೇವಲ 3 ವಿಕೆಟ್ ಕಳೆದು ಕೊಂಡು ನಿಗದಿತ ಗುರಿಯನ್ನ ತಲುಪಿ ಗೆಲುವಿನ ನಗೆಬೀರಿದರು .ಎಸ್ ಎಂ ಎಸ್ ಕಾಲೇಜಿನ ಸ್ವಸ್ತಿಕ್ ಆಚಾರ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆ ಭಾಜನರಾದರು.
ಪಂದ್ಯಾ ಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಉಪಾಧ್ಯಕ್ಷರು ರೆ.ಫಾ.ಲಾರೆನ್ಸ್ ಡಿಸೊಜಾ ರವರು ವಹಿಸಿದ್ದರು.
ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಶ್ರೀ ಅಲ್ವಾರಿಸ್ ಡಿಸಿಲ್ವ , ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಸ್ಪೊರ್ಟ್ಸ್ ಸೆಕ್ರೆಟರಿ ಶ್ರೀ ಹೆರಿಕ್ ಡಿಸೊಜಾ, ಮಂಗಳೂರು ವಿಶ್ವವಿದ್ಯಾನಿಲಯದ ಪರವಾಗಿ ಶ್ರೀ ಬಿಜು ಜೇಕಬ್ , ಪ್ರಾಂಶುಪಾಲರಾದ ಡಾ.ಮಂಜುನಾಥ್ ಉಡುಪ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರಕಾಶ್ ಡಿ ಸೋಜಾ ಉಪಸ್ಥಿತರಿದ್ದರು.ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಶ್ರೀ ಆಶ್ವಿನ್ ಶೆಟ್ಟಿ ನೆರವೆರಿಸಿ ,ಶ್ರೀ ಭರತ್ ರಾಜ್ ಎಸ್ ಕಾರ್ಯಕ್ರಮವನ್ನ ನಿರೂಪಿಸಿದರು .
No comments:
Post a Comment