ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರ
ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಖೋ ಖೋ ಪಂದ್ಯಕೂಟದಲ್ಲಿ ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರದ ಪುರುಷ ಹಾಗೂ ಮಹಿಳಾ ತಂಡಗಳು ಶ್ರೇಷ್ಠ ಪ್ರದರ್ಶನ ನೀಡಿ ಗಮನಸೆಳೆದಿವೆ.
ಮಹಿಳಾ ವಿಭಾಗದಲ್ಲಿ ಪ್ರಾಥಮಿಕ ಸುತ್ತಿನಿಂದಲೇ ತಂಡ ಉತ್ತಮ ಆಟವನ್ನು ಪ್ರದರ್ಶಿಸಿ ಪ್ರಥಮ ಸ್ಥಾನವನ್ನು ಪಡೆದಿದೆ.
ಪುರುಷರ ತಂಡವು ಪ್ರಾಥಮಿಕ ಸುತ್ತಿನಲ್ಲಿ ಶ್ರೇಷ್ಠ ಆಟವನ್ನು ತೋರಿಸಿ ಪ್ರಥಮ ಸ್ಥಾನ ಗಳಿಸಿದ್ದು, ಚಾಂಪಿಯನ್ಸ್ ಸುತ್ತಿನಲ್ಲಿ ಅದ್ಭುತ ಹೋರಾಟದೊಂದಿಗೆ ರನ್ನರ್ ಅಪ್ ಬಹುಮಾನವನ್ನು ಪಡೆದು ಕಾಲೇಜಿನ ಕ್ರೀಡಾ ಶ್ರೇಷ್ಠತೆಯನ್ನು ಇನ್ನಷ್ಟೂ ಎತ್ತರಿಸಿದೇ.
ಈ ಪಂದ್ಯಕೂಟದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಕೌಶಲ್ಯಗಳು ಸಹ ವಿಶೇಷ ಗಮನ ಸೆಳೆದಿವೆ.
ಮಹಿಳಾ ವಿಭಾಗದ ಪ್ರಾಥಮಿಕ ಸುತ್ತಿನಲ್ಲಿ ವಿಜಯಲಕ್ಷ್ಮಿ – ಅತ್ಯುತ್ತಮ ಆಲ್ರೌಂಡರ್ ಪ್ರಶಸ್ತಿ.
ಪುರುಷರ ವಿಭಾಗದ ಪ್ರಾಥಮಿಕ ಸುತ್ತಿನಲ್ಲಿ ಕನಿಷ್ಕ – ಬೆಸ್ಟ್ ಡಿಫೆಂಡರ್ ಪ್ರಶಸ್ತಿ.
ಪುರುಷರ ಚಾಂಪಿಯನ್ಸ್ ಸುತ್ತಿನಲ್ಲಿ ಸುಜಯ್ – ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದಿರುತ್ತಾರೆ.
ಕಿರಣ್ ಬ್ರಹ್ಮಾವರ ಅವರ ಅತ್ಯುತ್ತಮ ತರಬೇತಿ, ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ್ ಭಟ್ ಮಾರ್ಗದರ್ಶನ, ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಅವರ ಪ್ರೋತ್ಸಾಹ ಮತ್ತು ಬೆಂಬಲದ ಬಲದಿಂದ ಕಾಲೇಜಿನ ಖೋ ಖೋ ತಂಡವು ಸಾಧನೆಗೈಯಲು ಸಾಧ್ಯವಾಗಿದೆ .
ಈ ಪಂದ್ಯಕೂಟದಲ್ಲಿ ಗಳಿಸಿದ ಸಾಧನೆಗಳು ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿವೆ.





No comments:
Post a Comment