⚡ Latest News ⚡

Upcoming Events : 🔥 🔴🔥 Cooking with fire, Sports Day🔥

Saturday, October 3, 2026

Logo Design Competition


 

The Department of Computer Applications in collaboration with the IT Association and IQAC organized an interclass Logo Design Competition, INSIGNIA 3.0 for BCA students on 19th September 2026.The competition was organized with an aim to provide a platform for students to showcase their creativity and design skills through the blend of art and technology.

The interclass event featured three creative categories – Logo Design on Computer, Logo Design on Floor, and Tech+Art Craft Design based on technical themes. All Students participated enthusiastically and presented innovative logos with unique concepts and impressive presentations.

The competitions were judged by Dr. Prashantha Shetty,Assistant Professor, Department of B.A and Lt.Ashwin Shetty A,Assistant Professor,Department of Commerce. The judges appreciated the participants for their originality, creativity, and presentation skills.All faculty members of the department were present to encourage the students. The event concluded as a memorable and grand success.

Friday, October 2, 2026

ಗಾಂಧೀ ಜಯಂತಿ ಅಂಗವಾಗಿ ಮುರುಡೇಶ್ವರ ರೈಲು ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮ

 ಗಾಂಧೀ ಜಯಂತಿ ಅಂಗವಾಗಿ ಮುರುಡೇಶ್ವರ ರೈಲು ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ SMS ಕಾಲೇಜು, ಬ್ರಹ್ಮಾವರದ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ವತಿಯಿಂದ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮುರುಡೇಶ್ವರ ರೈಲು ನಿಲ್ದಾಣದ ಉಪ ವಾಣಿಜ್ಯ ವ್ಯವಸ್ಥಾಪಕರಾದ ಶ್ರೀ ದಿಲೀಪ್ ಭಟ್, ನಿಲ್ದಾಣ ವ್ಯವಸ್ಥಾಪಕರಾದ ಶ್ರೀ ಅಕ್ಷಯಕುಮಾರ್ ನಾಯಕ್, ಹಿರಿಯ ವಾಣಿಜ್ಯ ಸಹಾಯಕರಾದ ಶ್ರೀ ರವಿ ದೇವಾಡಿಗ, ಪಾಯಿಂಟ್ಸ್‌ಮನ್ ಶ್ರೀ ಭಾಸ್ಕರ್ ಗೊಂಡ, ಹೌಸ್‌ಕೀಪಿಂಗ್ ಸಿಬ್ಬಂದಿಗಳಾದ ಶ್ರೀಮತಿ ಜ್ಯೋತಿ ಹಾಗೂ ಶ್ರೀ ಶ್ರೀಜೀಶ್ ಉಪಸ್ಥಿತರಿದ್ದರು.SMS ಕಾಲೇಜು, ಬ್ರಹ್ಮಾವರದ NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಹಾಗೂ ಡಾ. ಮಂಜುನಾಥ್ ಉಡುಪ, NSS ಸಹಾಯಕ ಕಾರ್ಯಕ್ರಮಾಧಿಕಾರಿಯಾದ ಕುಮಾರಿ ನಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಶ್ರೀ ದಿಲೀಪ್ ಭಟ್ ಅವರು NSS ಸ್ವಯಂಸೇವಕರಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಕಾಪಾಡುವುದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಹಾಗೂ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಂಕಲ್ಪವನ್ನು ಕೈಗೊಂಡರು.

ಸುಮಾರು 107 NSS ಸ್ವಯಂಸೇವಕ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ವಿದ್ಯಾರ್ಥಿಗಳು ರೈಲು ನಿಲ್ದಾಣದ ವಿವಿಧ ಪ್ರದೇಶಗಳನ್ನು ಸ್ವಚ್ಛಗೊಳಿಸಿ, ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರು. ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಸ್ಥಳಗಳ ಜವಾಬ್ದಾರಿಯುತ ನಿರ್ವಹಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.

ಮಹಾತ್ಮ ಗಾಂಧೀಜಿಯವರ ಸ್ವಚ್ಛತೆಯ ಸಂದೇಶವನ್ನು ಕಾರ್ಯರೂಪಕ್ಕೆ ತರುವ ಮೂಲಕ NSS ಸ್ವಯಂಸೇವಕರು ಸಮಾಜಕ್ಕೆ ಸ್ವಚ್ಛತೆ ಮತ್ತು ಜವಾಬ್ದಾರಿಯ ಮಹತ್ವವನ್ನು ಸಾರಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ, ಸೇವಾ ಮನೋಭಾವ ಮತ್ತು ಪರಿಸರ ಕಾಳಜಿಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.

Thursday, October 1, 2026

SMS College Alumni Association :ANNUAL GENERAL BODY MEETING – 2026

 SMS College Alumni Association :ANNUAL GENERAL BODY MEETING – 2026

The Annual General Body Meeting (AGM) of the SMS College Alumni Association (R.), Brahmavar was held on Sunday, 27th September 2026 at 10:00 a.m. at the Rev. Fr. P. G. Koshy Memorial Auditorium, SMS College, Brahmavar.

The programme commenced with a prayer by Ms. Chandana. The Alumni Staff Convenor, Mrs. Tweeny Maria Rodrigues,  warmly welcomed the office bearers, alumni members, staff and all the gathering.

The Principal, Dr. Robert Rodrigues, delivered the introductory remarks and highlighted the importance of the Alumni Association in maintaining a strong and meaningful connection between the institution and its alumni.He also remembered Late Mr. Albert Rony D' Silva, who had served as an Executive Member of the Alumni Association. He recalled his contributions and association with the institution and the alumni community. As a mark of respect, the gathering observed one minute of silence in memory of Late Mr. Albert Rony D' Silva and other departed alumni members.

The Annual Report for the year 2025–2026 was presented by the Secretary, Mr. Sachin Poojary. The report highlighted the activities and achievements of the Alumni Association during the year.

The Treasurer, Mr. Joseph Suaris, presented the Audited Financial Statement for 2025–2026 and the Budget for 2026–2027. The financial matters were placed before the members for consideration and approval.

The election of the new office bearers and executive committee members for the term 2026–2028 was conducted by Mr. Prashanth Shetty, Department of History and Archaeology. During the election, the members proposed Mr. Sakaram Somayaji to continue as the President, Mr. Sachin Poojary as the Secretary, and Mr. Joseph Suaris as the Treasurer. Mrs. Shantha was elected as the Vice President. Other executive committee members were also selected during the election process.

Mr. Sakaram Somayaji, the President, delivered his presidential remarks. He expressed his gratitude to the members for their continued trust and support. He also remembered Late Mr. Albert Rony D' Silva and acknowledged his valuable contribution to the Alumni Association and the institution. Mr. Sakaram Somayaji expressed his commitment to the institution and assured the gathering that he would extend his support and do whatever was possible from his side for the development and betterment of the institution. The meeting also provided an opportunity for members to share suggestions for strengthening alumni engagement and future activities of the association.

The vote of thanks was proposed by Mrs. Shantha, who expressed gratitude to the Principal, office bearers, alumni members, staff and everyone who contributed to the successful conduct of the AGM.The programme was hosted by Mrs. Vidyalata and Mrs. Jayashree from the Language Department, who coordinated the proceedings effectively.

The AGM concluded on a positive note with renewed enthusiasm and commitment towards strengthening the SMS College Alumni Association and fostering continued collaboration between the institution and its alumni.

Wednesday, September 30, 2026

ADVAYA 3.0 – “FROM CLASSROOM TO MARKETPLACE

 ADVAYA 3.0 – “FROM CLASSROOM TO MARKETPLACE”

The Department of Commerce, in association with the Commerce Association and IQAC, hosted ADVAYA 3.0 – “From Classroom to Marketplace” on 29 September 2026.The programme featured a New Product Launch activity, where students presented their innovative product ideas through Advertising Videos and PPT Presentations. The activity provided students with practical exposure to product development, branding, advertising, marketing, communication and entrepreneurship.The programme was graced by Vice Principal Mr. Prasanna Shetty, HOD of Commerce Mrs. Tweeny Maria Rodrigues, IQAC Coordinator Lt. Ashwin Shetty, and Commerce Association Convenor Mrs. Asha T. K. The Commerce Association Secretaries – Anup, Sumanth and Varun actively contributed to the successful conduct of the programme

The presentations were evaluated by Dr. Bharath Raj S., HOD of Economics, and Mr. Jude Alfred Furtado, Department of English.The event provided students with an opportunity to connect classroom concepts with real-world marketplace practices and encouraged creativity, teamwork, communication skills and entrepreneurial thinking.The programme was successfully conducted with active participation and enthusiasm from the students.

Saturday, September 26, 2026

ಏಡ್ಸ್ ಜಾಗೃತಿ ಕಾರ್ಯಕ್ರಮ


ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರದ ರಾಷ್ಟ್ರೀಯ ಸೇವಾ ಯೋಜನೆ (NSS) ಹಾಗೂ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ರೋಟರಿ ಕ್ಲಬ್ ಸಾಲಿಗ್ರಾಮ-ಕೋಟಾ ಇವರ ಸಹಯೋಗದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನುಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರದ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಸಾಲಿಗ್ರಾಮದ ಅಧ್ಯಕ್ಷರಾದ ಶ್ರೀ ಮಿಲ್ಟನ್ ಡಿ'ಅಲ್ಮೇಡಾ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ICTC, ಉಡುಪಿಯ ಕೌನ್ಸೆಲರ್ ಶ್ರೀಮತಿ ಸಾವಿತ್ರಿ ಕುಂದರ್ ಅವರು ಭಾಗವಹಿಸಿದ್ದರು.


ಕಾರ್ಯಕ್ರಮಕ್ಕೆ ಶ್ರೀ ಆದಿತ್ಯ ಎಚ್.ಎಸ್. ಅವರು ಸ್ವಾಗತವನ್ನು ಕೋರಿದರು. ಕುಮಾರಿ ಕೀರ್ತನಾ ಹಾಗೂ ಗೌರವ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಅವರು ಮಾತನಾಡಿ, ಏಡ್ಸ್ ಕುರಿತು ವಿದ್ಯಾರ್ಥಿಗಳು ವೈಜ್ಞಾನಿಕ ಹಾಗೂ ವೈಚಾರಿಕ ಅರಿವನ್ನು ಹೊಂದಿರಬೇಕು ಎಂದು ತಿಳಿಸಿದರು. ಏಡ್ಸ್ ರೋಗದ ಬಗ್ಗೆ ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳು ಮತ್ತು ಭಯವನ್ನು ನಿವಾರಿಸುವಲ್ಲಿ ಜಾಗೃತಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುವಜನತೆ ಜವಾಬ್ದಾರಿಯುತ ಜೀವನಶೈಲಿಯನ್ನು ಅಳವಡಿಸಿಕೊಂಡು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಶ್ರೀ ಮಿಲ್ಟನ್ ಡಿ'ಅಲ್ಮೇಡಾ, ಅಧ್ಯಕ್ಷರು, ರೋಟರಿ ಕ್ಲಬ್ ಸಾಲಿಗ್ರಾಮ ಅವರು ಮಾತನಾಡಿ, ಯುವಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಎನ್. ಎಸ್. ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸುತ್ತಿರುವುದನ್ನು ಅವರು ಶ್ಲಾಘಿಸಿದರು. ಏಡ್ಸ್ ತಡೆಗಟ್ಟುವಲ್ಲಿ ಜಾಗೃತಿ, ಮುನ್ನೆಚ್ಚರಿಕೆ ಮತ್ತು ಜವಾಬ್ದಾರಿಯುತ ನಡವಳಿಕೆ ಅತ್ಯಂತ ಮುಖ್ಯವೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಸಾವಿತ್ರಿ ಕುಂದರ್, ಕೌನ್ಸೆಲರ್, ICTC ಉಡುಪಿ ಅವರು ಏಡ್ಸ್‌ನ ಕಾರಣಗಳು, ಹರಡುವ ವಿಧಾನಗಳು, ತಡೆಗಟ್ಟುವ ಕ್ರಮಗಳು ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಿದರು. HIV ಸೋಂಕಿನ ಕುರಿತು ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಅಗತ್ಯವನ್ನು ಅವರು ವಿವರಿಸಿದರು. HIV ಸೋಂಕಿತರನ್ನು ತಾರತಮ್ಯವಿಲ್ಲದೆ ಮಾನವೀಯತೆಯಿಂದ ಕಾಣಬೇಕು ಹಾಗೂ ಸರಿಯಾದ ಮಾಹಿತಿಯನ್ನು ಪಡೆದು ಜಾಗೃತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಹಾಗೂ ಡಾ. ಮಂಜುನಾಥ ಉಡುಪ, ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಶ್ರೀ ಆಲ್ಫ್ರೆಡ್ ಫುರ್ಟಾಡೊ ಹಾಗೂ NSS ಸಹಾಯಕ ಅಧಿಕಾರಿ ಕುಮಾರಿ ನಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಏಡ್ಸ್ ಕುರಿತು ವೈಜ್ಞಾನಿಕ ಅರಿವು, ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.

St. Mary’s Syrian College Students Participate in National Conference at Sri Mahaveera College, Moodbidri

 St. Mary’s Syrian College Students Participate in National Conference at Sri Mahaveera College, Moodbidri

September 26, 2026 — Six students from the Department of Economics, St. Mary’s Syrian College, Brahmavar, actively participated in a One-Day Multidisciplinary National Conference held at Sri Mahaveera College, Moodbidri.

The conference, organized in collaboration with the Mangalore University Economics Association (MUEA), was themed "Financial Inclusion, Skill India, and Entrepreneurship: Pathways to Inclusive Growth and Sustainable Development."

The delegation was led and mentored by Dr. Bharathraj S. Nejar, Head and Assistant Professor, Department of Economics, St. Mary’s Syrian College, Brahmavar.Throughout the day-long event, the participating students engaged in academic deliberations, technical paper presentations, and interactive discussions focusing on the crucial roles of financial accessibility, skill enhancement, and entrepreneurial initiatives in driving national economic sustainability and inclusive growth.

ಎಸ್.ಎಂ.ಎಸ್. ಕಾಲೇಜಿಗೆ ಕುಸ್ತಿ ಪಂದ್ಯಾವಳಿಯಲ್ಲಿ ಸಮಗ್ರ ರನ್ನರ್-ಅಪ್

 ಎಸ್.ಎಂ.ಎಸ್. ಕಾಲೇಜಿಗೆ ಮಂಗಳೂರು ವಿವಿ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸಮಗ್ರ ರನ್ನರ್-ಅಪ್ ಗೌರವ

ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು (MUIC) ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ   ಎಸ್.ಎಂ.ಎಸ್. (S.M.S.) ಕಾಲೇಜು ಅತ್ಯುತ್ತಮ ಸಾಧನೆ ಮಾಡಿದ್ದು, ಪುರುಷರ ವಿಭಾಗದಲ್ಲಿ ಸಮಗ್ರ ರನ್ನರ್-ಅಪ್ (Overall Runners-Up) ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಪಂದ್ಯಾವಳಿಯುದ್ದಕ್ಕೂ ಕಾಲೇಜಿನ ಕುಸ್ತಿ ಪಟುಗಳು ಅತ್ಯುತ್ತಮ ಕ್ರೀಡಾಸ್ಪೂರ್ತಿ, ದೃಢಸಂಕಲ್ಪ ಹಾಗೂ ಕೌಶಲವನ್ನು ಪ್ರದರ್ಶಿಸುವ ಮೂಲಕ ಸಂಸ್ಥೆಗೆ ಹೆಮ್ಮೆ ಮತ್ತು ಕೀರ್ತಿಯನ್ನು ತಂದಿದ್ದಾರೆ.

ವಿಜೇತ ಸ್ಪರ್ಧಿಗಳ ವಿವರ:

 * 🥇 ಸಜನ್ – ಚಿನ್ನದ ಪದಕ

 * 🥈 ಗಗನ್ ಜಿ. – ಬೆಳ್ಳಿಯ ಪದಕ

 * 🥉 ವರುಣ್ ಎಮ್. ಕುಂದರ್ – ಕಂಚಿನ ಪದಕ

 * 🥉 ಪೃಥ್ವಿಕ್ – ಕಂಚಿನ ಪದಕ

 * 🥉 ರತ್ವಿಕ್ – ಕಂಚಿನ ಪದಕ

 * 🥉 ಸ್ಟೆಫಿನ್ – ಕಂಚಿನ ಪದಕ

 * 🥉 ಸಿಮಾನಿ – ಕಂಚಿನ ಪದಕ

ವಿಜೇತ ಕ್ರೀಡಾಪಟುಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

Dengue Awareness Programme

 Dengue Awareness Programme

The Rovers and Rangers participated in a Dengue Awareness Programme as part of community service programme at Indiranagar, Brahmavara, on 25 September 2026. 

The Rovers and Rangers interacted with the public and created awareness about keeping the surroundings clean, avoiding stagnant water and taking necessary precautions to prevent the spread of dengue.The programme provided the students an opportunity to serve and interact with the local community.

Thursday, September 24, 2026

ಎನ್. ಎಸ್. ಎಸ್ ದಿನಾಚರಣೆ

 ಎನ್. ಎಸ್. ಎಸ್ ದಿನಾಚರಣೆ 


ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರದಲ್ಲಿ ಎನ್. ಎಸ್. ಎಸ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಎನ್. ಎಸ್. ಎಸ್ ಧ್ವಜಾರೋಹಣ ಹಾಗೂ ಮಲೇರಿಯಾ ಮತ್ತು ಡೆಂಗ್ಯೂ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಅವರು ಎನ್. ಎಸ್.ಎಸ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಹಾಗೂ ಡಾ. ಮಂಜುನಾಥ ಉಡುಪ, ಮತ್ತು ಎನ್. ಎಸ್. ಎಸ್ ಸಹಾಯಕ ಅಧಿಕಾರಿ ಕುಮಾರಿ ನಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ಡಾ. ಮಂಜುನಾಥ ಉಡುಪ, ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಅವರು ನೆರವೇರಿಸಿದರು. ಅವರು ಎನ್. ಎಸ್. ಎಸ್ ನ ಉದ್ದೇಶ, ಸಮಾಜ ಸೇವೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಎನ್. ಎಸ್. ಎಸ್ ಘಟಕದ ಮಹತ್ವವನ್ನು ವಿವರಿಸಿದರು.

ನಂತರ ಮಾತನಾಡಿದ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಅವರು ಎನ್. ಎಸ್. ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸಮಾಜದ ಸಮಸ್ಯೆಗಳನ್ನು ಅರಿತುಕೊಂಡು, ಅವುಗಳ ಪರಿಹಾರಕ್ಕಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿಶೇಷವಾಗಿ ಆರೋಗ್ಯ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಎನ್. ಎಸ್. ಎಸ್ ಸ್ವಯಂಸೇವಕರು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಎನ್. ಎಸ್. ಎಸ್ ನಾಯಕಿ ಕುಮಾರಿ ಕೀರ್ತನಾ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.ಧ್ವಜಾರೋಹಣ ಕಾರ್ಯಕ್ರಮದ ನಂತರ ಎನ್. ಎಸ್. ಎಸ್ ಸ್ವಯಂಸೇವಕರು ಮಲೇರಿಯಾ ಮತ್ತು ಡೆಂಗ್ಯೂ ಕುರಿತು ಮನೆ-ಮನೆ ಜಾಗೃತಿ ಅಭಿಯಾನವನ್ನು ಕೈಗೊಂಡರು. ಸ್ವಯಂಸೇವಕರು ಸುಮಾರು 50 ಮನೆಗಳಿಗೆ ಭೇಟಿ ನೀಡಿ, ಮಲೇರಿಯಾ ಮತ್ತು ಡೆಂಗ್ಯೂ ರೋಗಗಳ ಹರಡುವಿಕೆ, ಲಕ್ಷಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಸೊಳ್ಳೆಗಳಿಂದ ರಕ್ಷಣೆ ಪಡೆಯುವ ಅಗತ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.


ಈ ಕಾರ್ಯಕ್ರಮದ ಮೂಲಕ ಎನ್. ಎಸ್. ಎಸ್ ಸ್ವಯಂಸೇವಕರು ಸಮಾಜದೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿ, ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. “ನನಗಾಗಿ ಅಲ್ಲ, ನಿನಗಾಗಿ” ಎಂಬ ಎನ್. ಎಸ್. ಎಸ್ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

GERMAN CLASS INAUGURATION AND DEMO

 GERMAN CLASS INAUGURATION AND DEMO

The German Class Inauguration and Demo was successfully conducted on 24 September 2026 at the Computer Lab of Saint Mary’s Syrian College, Brahmavar, in association with Ajinorah – Get Set Fly. The programme aimed to introduce students to the German language and create awareness about global educational and career opportunities.

The Resource persons for the programme were Mrs. Sandra Jacob, Regional Manager, Karnataka; Mrs. Neethu Krishna, Academic HOD; Mr. Susheel Kumar K.R., Marketing Manager, Karnataka; and Ms. Sowmini, Demo Trainer.

 Dr. Robert Rodrigues J. Principal , addressed the students and highlighted the various opportunities available to them through foreign language learning. He encouraged the students to make the best use of such opportunities to enhance their knowledge, skills and future career prospects.

 The Resource persons explained the importance of learning German and the educational and career opportunities it offers. Ms. Sowmini conducted an excellent interactive demonstration session, introducing students to the basics of the German language.

The programme was compered by Ms. Samantha Lobo, a B.Com. student. Mrs Seema Lewis, Programme Coordinator delivered the welcome speech,Lt. Ashwin Shetty, IQAC Coordinator, proposed the vote of thanks.

The programme was informative and successful, motivating students to explore foreign language learning and broaden their global opportunities.

ನಾಯಕತ್ವ ತರಬೇತಿ ಕಾರ್ಯಕ್ರಮ

 ನಾಯಕತ್ವ ತರಬೇತಿ ಕಾರ್ಯಕ್ರಮ

ಬ್ರಹ್ಮಾವರ, ಸೆಪ್ಟೆಂಬರ್ 22:  ಎಸ್‌ಎಂಎಸ್ ಕಾಲೇಜು ಬ್ರಹ್ಮಾವರದ ವಿದ್ಯಾರ್ಥಿ ಕ್ಷೇಮಪಾಲನ ಸಂಘ(SWC) ಹಾಗೂ ಎನ್‌ಸಿಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 22, 2026ರಂದು ವಿದ್ಯಾರ್ಥಿಗಳಿಗಾಗಿ ಅರ್ಧ ದಿನದ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಕಳದ ನಾಯಕತ್ವ ಮತ್ತು ವ್ಯಕ್ತಿತ್ವ ತರಬೇತುದಾರರಾದ ಶ್ರೀಯುತ ಅಜಿತ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳು, ತಂಡದ ನಿರ್ವಹಣೆ, ಸಂವಹನ ಕೌಶಲ್ಯ, ಆತ್ಮವಿಶ್ವಾಸ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಜವಾಬ್ದಾರಿಯುತ ನಾಯಕತ್ವದ ಕುರಿತು ತರಬೇತಿ ನೀಡಿದರು. ಕೇವಲ ಉಪನ್ಯಾಸಕ್ಕೆ ಸೀಮಿತವಾಗದೆ, ವಿವಿಧ ಚಟುವಟಿಕೆಗಳು ಹಾಗೂ ಪ್ರಾಯೋಗಿಕ ಅಭ್ಯಾಸಗಳ ಮೂಲಕ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು ತರಬೇತಿ ನೀಡಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಚಟುವಟಿಕೆಗಳಲ್ಲಿ ಭಾಗವಹಿಸಿ ನಾಯಕತ್ವದ ಅನುಭವವನ್ನು ಪಡೆದುಕೊಂಡರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಪದಾಧಿಕಾರಿಗಳಾದ ಸುಬ್ರಹ್ಮಣ್ಯ, ಪ್ರಜ್ವಲ್, ಅಭಿಜ್ಞಾ, ದಿವ್ಯಜ್ಯೋತಿ, ಮೆಹನಾಜ್ ಹಾಗೂ ಶಿವಾಜಿ ಉಪಸ್ಥಿತರಿದ್ದರು.

ಎನ್‌ಸಿಸಿ ನಾಯಕಿ ಶ್ರಾವ್ಯ, ತೃತೀಯ ಬಿ. ಸಿ ಎ ಸ್ವಾಗತಿಸಿದರು.ಸುಬ್ರಹ್ಮಣ್ಯ ತೃತೀಯ ಬಿ ಕಾಮ್ ಪ್ರಾಸ್ತವಿಕ ಮಾತುಗಳನ್ನಡಿದರು, ಲಕ್ಷಿತಾ, ದ್ವಿತೀಯ ಬಿ. ಎ ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ನೀಡಿದರು. ಗೌರವ್ ದ್ವಿತೀಯ ಬಿ.ಕಾಮ್, ಎನ್‌ಎಸ್‌ಎಸ್ ಸ್ವಯಂಸೇವಕ, ವಂದನಾರ್ಪಣೆ ನೆರವೇರಿಸಿದರು. ಅಂಬಿಕಾ ದ್ವಿತೀಯ ಬಿ. ಕಾಮ್ ಕಾರ್ಯಕ್ರಮವನ್ನು ನಿರೂಪಿಸಿದರು.

ವಿದ್ಯಾರ್ಥಿ ಕ್ಷೇಮಪಾಲನ ಸಂಘದ ನಿರ್ದೇಶಕರಾದ ಡಾ. ಪ್ರಶಾಂತ್ ಶೆಟ್ಟಿ ಹಾಗೂ ಶ್ರೀಮತಿ ಸುಪ್ರಿತಾ ಮತ್ತು ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಆಶ್ವಿನ್ ಶೆಟ್ಟಿ ಎ. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಸಾಮರ್ಥ್ಯ, ತಂಡದ ಮನೋಭಾವ, ಆತ್ಮವಿಶ್ವಾಸ ಹಾಗೂ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಸ್ಫೂರ್ತಿದಾಯಕ ಅನುಭವವನ್ನು ನೀಡಿತು.

Wednesday, September 23, 2026

ಎಸ್ಎಂಎಸ್ ಕಾಲೇಜಿನಲ್ಲಿ ಹಿಂದಿ ದಿನಾಚರಣೆ

 ಎಸ್ಎಂಎಸ್ ಕಾಲೇಜಿನಲ್ಲಿ ಹಿಂದಿ ದಿನಾಚರಣೆ 


       ಬ್ರಹ್ಮಾವರ ದಿನಾಂಕ 23 / 9 /2026 ರಂದು ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ, ಇಲ್ಲಿ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯ ಕಾಲೇಜು, ಮುಲ್ಕಿ ಇಲ್ಲಿನ ಸಹಾಯಕ ಪ್ರಾಧ್ಯಾಪಕಿಯಾದ ಡಾ. ದೀಪಿಕಾ ಎಸ್ ಇವರು ಅಭ್ಯಾಗತರಾಗಿ ಆಗಮಿಸಿ ಪದವಿ ಹಂತದಲ್ಲಿ ಹಿಂದಿಯನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿದರೆ, ಸಿಗಬಹುದಾದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಹಿಂದಿ ದಿನದ ಮಹತ್ವವನ್ನು ತಿಳಿಸಿದರು. ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರಾಡ್ರಿಗಸ್ ಅವರು ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ಭಾಷೆಯ ಬಗ್ಗೆ ಕೀಳರಿಮೆ ಇಟ್ಟುಕೊಳ್ಳದೆ ಆಸಕ್ತಿಯಿಂದ ಹೆಚ್ಚು -ಹೆಚ್ಚು ಭಾಷೆಗಳನ್ನು ಕಲಿಯಬೇಕೆಂದು ಕಿವಿಮಾತು ಹೇಳಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಉಡುಪ ಕೆ. ಇವರು ಕಾರ್ಯಕ್ರಮವನ್ನು ಆಯೋಜಿಸುವುದರೊಂದಿಗೆ ಹಿಂದಿ ದಿನಾಚರಣೆ ಪ್ರಯುಕ್ತ ಪ್ರಾಸ್ತಾವಿಕ ಮಾತನಾಡಿದರು. ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಜ್ಯೋತಿ ಇವರು ಅಭ್ಯಾಗತರನ್ನು ಸ್ವಾಗತಿಸಿದರೆ ತೃತೀಯ ಬಿ.ಎ. ವಿದ್ಯಾರ್ಥಿನಿ ಕುಮಾರಿ ಸಹನಾ ಇವರು ವಂದಿಸಿದರು .ಕುಮಾರಿ ಅರ್ಚನಾ ಮತ್ತು ಕುಮಾರಿ ಮೆಹನಾಸ್ ಇವರು ಕಾರ್ಯಕ್ರಮ ನಿರೂಪಿಸಿದರೆ ಕುಮಾರಿ ಚಂದನ ಪ್ರಾರ್ಥಿಸಿದರು. 

             ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಂದಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಇದರಲ್ಲಿ ಕುಮಾರಿ ಅರ್ಚನಾ ಅಂತಿಮ ಬಿ.ಎ, ಕುಮಾರಿ ಮೆಹನಾಸ್ ಅಂತಿಮ ಬಿ.ಸಿ.ಎ ಮತ್ತು ಕುಮಾರಿ ಸಹನಾ ಅಂತಿಮ ಬಿ.ಎ. ಇವರು ಕ್ರಮವಾಗಿ ಪ್ರಥಮ ,ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.


Saturday, September 19, 2026

S.M.S. College Shines at Kaushal - 2026

S.M.S. College, Brahmavara, showcased an excellent performance at Kaushal 2026 – The Skill Test, organised by the Manipal Skill Development Centre.

The students demonstrated their knowledge, creativity and technical skills in the AI/ML Agriculture Project, bringing laurels to the institution by securing multiple prizes.

Prize Winners:


- 🥈 Vidya – II Prize

- 🥈 Shishir – II Prize

- 🥈 Mehanaaz – II Prize

- 🥉 Anurag – III Prize

- 🥉 Prarthana – III Prize







Thursday, September 17, 2026

Two-Day Soft Skills Training Programme


A Two-Day Soft Skills Training Programme was organised for the final-year BCA students at the Ramakrishna Hegde Skill Development Centre (RHSDC), Udupi, on 10 and 12 September 2026, in collaboration with the Konkan Railway Academy, Madgaon.

The first day featured insightful sessions on Office Etiquettes, Leadership Qualities, CV Writing, and Interview Techniques, led by Dr. Mithun S. Ullal, Mr. Likith, and Mr. Sachin. The sessions focused on strengthening students’ professional conduct, leadership abilities, resume-building skills, and interview preparation.

The second day covered Communication Skills and Employment Opportunities in Railways, conducted by Dr. Mithun S. Ullal and Mr. Shridhara Avabhrath, Manager, T&D, KRCL. The programme provided students with practical insights into workplace communication and career opportunities in the railway sector, contributing to their overall professional development and employability.

Tuesday, September 15, 2026

SMS Cultural team 🏆 OVERALL CHAMPIONS 🏆

 SMS Cultural team 🏆 OVERALL CHAMPIONS 🏆



The Cultural Team of S.M.S. College, Brahmavar has brought laurels to the institution by securing the Overall Championship at the MUIC Cultural Fest – Kavadi Yuvakalostava, held on 14 September 2026 at Kavadi.

The team showcased outstanding talent and remarkable coordination in Semi-Classical, Yakshagana, Filmy Singing, Folk Dance, and Filmy Dance.With these impressive performances, dedication and teamwork, the Cultural Team emerged as the Overall Champions ofthe fest, winning a cash prize of ₹25,000.





Thursday, September 10, 2026

ರಾಷ್ಟ್ರೀಯ ಸೇವಾ ಯೋಜನೆ (NSS) ಉದ್ಘಾಟನಾ ಕಾರ್ಯಕ್ರಮ

 ರಾಷ್ಟ್ರೀಯ ಸೇವಾ ಯೋಜನೆ (NSS) ಉದ್ಘಾಟನಾ ಕಾರ್ಯಕ್ರಮ


SMS ಕಾಲೇಜು, ಬ್ರಹ್ಮಾವರದ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ವತಿಯಿಂದ NSS ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು SMS ಕಾಲೇಜು, ಬ್ರಹ್ಮಾವರದ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ಸುಧಾಕರ್ ವಕ್ವಾಡಿ ಅವರು ಉದ್ಘಾಟಿಸಿದರು.

NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, NSSನ ಉದ್ದೇಶ, ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸುವಲ್ಲಿ NSSನ ಪಾತ್ರದ ಕುರಿತು ವಿವರಿಸಿದರು. ಸಮಾಜಮುಖಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಹಾಗೂ ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸುಧಾಕರ್ ವಕ್ವಾಡಿ ಅವರು, ವಿದ್ಯಾರ್ಥಿ ಜೀವನದಲ್ಲಿ NSSನ ಮಹತ್ವವನ್ನು ವಿವರಿಸಿದರು. NSS ಕೇವಲ ಒಂದು ಸಂಘಟನೆಯಾಗಿರದೆ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ನಾಯಕತ್ವ, ಸಹಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ವೇದಿಕೆಯಾಗಿದೆ ಎಂದು ಹೇಳಿದರು. ಸಮಾಜದಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು, ಅವುಗಳ ಪರಿಹಾರಕ್ಕಾಗಿ ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಯುವಜನತೆ ದೇಶದ ಭವಿಷ್ಯವಾಗಿದ್ದು, ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.


ಅಧ್ಯಕ್ಷೀಯ ಭಾಷಣದಲ್ಲಿ ಡಾ. ರಾಬರ್ಟ್ ರೋಡ್ರಿಗಸ್, ಪ್ರಾಂಶುಪಾಲರು, SMS ಕಾಲೇಜು, ಬ್ರಹ್ಮಾವರ, ಅವರು NSS ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವಂತೆ ಕರೆ ನೀಡಿದರು. NSS ಮೂಲಕ ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜೊತೆಗೆ ಸಾಮಾಜಿಕ ಅರಿವು, ಮಾನವೀಯ ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು. ಸಮಾಜದ ಒಳಿತಿಗಾಗಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. NSS ಸ್ವಯಂಸೇವಕರು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವ ರೀತಿಯಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ BCA ವಿದ್ಯಾರ್ಥಿನಿ ಕುಮಾರಿ ಸ್ವಾತಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ದ್ವಿತೀಯ BCA ವಿದ್ಯಾರ್ಥಿ ಸಂಕೇತ್ ಅವರು ಸ್ವಾಗತ ಭಾಷಣ ನೆರವೇರಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ದ್ವಿತೀಯ BCA ವಿದ್ಯಾರ್ಥಿ ರತಿಕ್ ಅವರ ನೇತೃತ್ವದಲ್ಲಿ NSS ಸ್ವಯಂಸೇವಕರು NSS ಪ್ರತಿಜ್ಞೆಯನ್ನು ಸ್ವೀಕರಿಸಿದರು. ಪ್ರತಿಜ್ಞೆಯ ಮೂಲಕ ಸಮಾಜ ಸೇವೆ, ಶಿಸ್ತು, ಜವಾಬ್ದಾರಿ ಹಾಗೂ ರಾಷ್ಟ್ರ ಸೇವೆಯ ಬದ್ಧತೆಯನ್ನು ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ದ್ವಿತೀಯ B.Com ವಿದ್ಯಾರ್ಥಿನಿ ಕುಮಾರಿ ಕೀರ್ತನಾ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅಧ್ಯಕ್ಷರು, ಉದ್ಘಾಟಕರು, ಅಧ್ಯಾಪಕರು, NSS ಕಾರ್ಯಕ್ರಮಾಧಿಕಾರಿಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವದ ಗುಣಗಳು ಹಾಗೂ ರಾಷ್ಟ್ರ ಸೇವೆಯ ಬದ್ಧತೆಯನ್ನು ಬೆಳೆಸುವ ಸಾರ್ಥಕ ಪ್ರಯತ್ನವಾಗಿ ಯಶಸ್ವಿಯಾಗಿ ನೆರವೇರಿತು.

Career Guidance and Competitive Examinations Programme Held at SMS College

 

Career Guidance and Competitive Examinations Programme Held at SMS College


Brahmavar: 07-09-2026, Monday .

St. Mary’s Syrian College, Brahmavar, organised a programme on “Career Guidance and Competitive Examinations” for the first-year students with the objective of creating awareness about career opportunities and motivating students to prepare for various competitive examinations.

The programme was presided over by Dr. Robert Rodrigues J., Principal, St. Mary’s Syrian College, Brahmavar. Dr. Sakaram Somayaji was the Chief Guest, while Mr. Chandrakanth V. Chanthar served as the Resource Person.

Addressing the students, the Resource Person provided valuable guidance on career planning, competitive examinations and the importance of early preparation. The session encouraged students to identify suitable career paths and develop the knowledge, skills and discipline required to succeed in competitive examinations.

The programme was attended by all first-year students, who actively participated in the session and benefited from the guidance provided. Such programmes play an important role in helping students understand opportunities beyond their regular academic curriculum. The college has been actively promoting guidance related to competitive examinations and career development as part of its student-support initiatives.

Ms. Divyajyothi, Final B.Com, served as the Master of Ceremonies. Ms. Shriraksha, Final B.Com and Secretary of Competitive Examinations, was present on the occasion. The programme concluded with the vote of thanks proposed by Mr. Vighnesh Padiyar, Convenor of Competitive Examinations, who expressed gratitude to the Principal, Chief Guest, Resource Person, faculty members and students for their valuable contribution and participation.

The programme was informative and motivating, providing first-year students with useful insights into career opportunities and the significance of systematic preparation for competitive examinations.

Tuesday, September 8, 2026

Extension Activity of the Department of English

 Extension Activity of the Department of English

On 7 September 2026, B.A. English Optional students visited SMS English Medium School (State Syllabus) along with English Language teachers from SMS Degree College.

They engaged the school children through rhymes, drawing, singing, indoor games, and other activities. The programme helped the college students apply their knowledge while developing communication, leadership, creativity, teamwork, and teaching skills.

The activity benefited both groups by promoting joyful learning, social responsibility, empathy, and community engagement.



Sunday, August 30, 2026

Two-Day Soft Skills Training Programme

 Two-Day Soft Skills Training Programme

A two-day Soft Skills Training Programme was organised for the final year B.Com students of the college at the Ramakrishna Hegde Skill Development Centre (RHSDC), Udupi, on 24 and 28 August 2026. The programme was conducted in collaboration with the Konkan Railway Academy, Madgaon and aimed at enhancing the students’ professional and employability skills.

The first day featured sessions on Leadership Qualities, CV Writing and Interview Techniques, and Employment Opportunities in Railways. The sessions were handled by Dr. Mithun S. Ullal, and Mr. Shridhara Avabhrath, Manager, T&D, KRCL, respectively.

The second day focused on Communication Skills and Office Etiquettes, with sessions conducted by Dr. Vrinda and Dr. Shilpa. The training provided students with valuable exposure to essential workplace skills, professional communication, interview preparation and career opportunities.

Saturday, August 29, 2026

Konkani Manyata Divas Celebrated at SMS College, Brahmavar

 

Brahmavar, 28th August 2026: The Konkani Club of St. Mary's Syrian College (SMS College), Brahmavar, celebrated Konkani Manyata Divas with a vibrant cultural programme at the Rev. Fr. P. G. Koshy Memorial Auditorium on Friday.

The programme was presided over by Mr. Prasanna Shetty, Vice Principal of the college. In his presidential address, he appreciated the endeavours of the Konkani Club as an effective platform for students to exhibit their talents and emphasized the need for greater coordination among different Konkani dialects for the overall enrichment of the language and culture.

The programme commenced with a prayer led by Ms. Keerthana. Mr. Alfred Furtado, Convener of the Konkani Club, spoke on the relevance of the day and highlighted the importance of unity among Konkani speaking communities.

The formal function included unfurling of the Konkani flag and singing of the Konkani Anthem.Ms. Kavana Nayak, Secretary of the Club, proposed the vote of thanks. Mr. Aaron Lobo compered the programme meticulously.

The formal programme was followed by a colourful cultural extravaganza. Volunteers of the club entertained the audience with classical, semi-classical and modern dances and songs.The programme was sponsored by 'Madd Sobhann' and was attended by around 50 students.

Logo Design Competition