⚡ Latest News ⚡

Upcoming Events : 🔥 🔴🔥 Freshers Day, Traditional Games, Cooking with fire, Talents Day, Sports Day🔥

Friday, July 31, 2026

ಯುವ ಜನತೆ ಮತ್ತು ಮಾನಸಿಕ ಆರೋಗ್ಯ : ಮಾಹಿತಿ ಕಾರ್ಯಾಗಾರ

 

ಎಸ್ ಎಂ ಎಸ್  ಕಾಲೇಜು ಬ್ರಹ್ಮಾವರ ಇಲ್ಲಿನ ಮಹಿಳಾ ವೇದಿಕೆಯ ವತಿಯಿಂದ ದಿನಾಂಕ 31/7/2026 ಶುಕ್ರವಾರ ಪ್ರಥಮ ವರ್ಷದ ಬಿ ಎ, ಬಿ ಕಾಂ, ಬಿಸಿಎ ಎಲ್ಲಾ ವಿದ್ಯಾರ್ಥಿಗಳಿಗೆ  ಓರಿಯoಟೇಷನ್  ಕಾರ್ಯಕ್ರಮವನ್ನು ಆಯೋಜಿಸಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ  ಆಪ್ತಸಲಹೆಗಾರರು ಹಾಗೂ  ತರಬೇತುದಾರರಗಿರುವ ಸಿಸ್ಟರ್ ಲಿಲ್ಲಿ ಪುಷ್ಪ ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲರು  ಆಗಿರುವ ಶ್ರೀಯುತ ಪ್ರಸನ್ನ ಶೆಟ್ಟಿ  ಐ ಕ್ಯೂ ಎ ಸಿ ಸಂಯೋಜಕರಾದ  ಲೆಫ್ಟಿಂನೆಂಟ್ ಅಶ್ವಿನ್ ಶೆಟ್ಟಿ  ಹಾಗೂ ಮಹಿಳಾ ವೇದಿಕೆಯ ಸಲಹೆಗಾರರಾದ ಡಾ ವಿದ್ಯಾಲತ ಉಪಸ್ಥಿತರಿದ್ದರು.ಇಂಗ್ಲೀಷ್ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಸಿಮಾ ಲೂಯಿಸ್ ಹಾಗೂ ರಾಜ್ಯಶಾಸ್ತ್ರ ವಿಭಾಗ  ಮುಖ್ಯಸ್ಥರಾದ ಶ್ರೀಮತಿ ಮಮತ ಮೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಕೀರ್ತನ ಪ್ರಾರ್ಥನೆಮಾಡಿದರು.

No comments: