⚡ Latest News ⚡

Upcoming Events : 🔥 🔴🔥 Cooking with fire, Talents Day, Sports Day🔥

Saturday, August 29, 2026

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ

 ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ


ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಐ ಕ್ಯೂ ಎ ಸಿ, ದೈಹಿಕ ಶಿಕ್ಷಣ ವಿಭಾಗ, ವಿದ್ಯಾರ್ಥಿ ಕ್ಷೇಮಪಾಲನ ಸಂಘ, ಎನ್ ಸಿ ಸಿ, ಎನ್ ಎಸ್ ಎಸ್, ರೇಂಜರ್ ಹಾಗೂ ರೋವರ್ ಕ್ಲಬ್, ರೆಡ್ ಕ್ರಾಸ್ ಯುನಿಟ್, ಹಳೆ ವಿದ್ಯಾರ್ಥಿ ಸಂಘ, ರಕ್ಷಕ ಶಿಕ್ಷಕ ಸಂಘ ಹಾಗೂ ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕುರು, ರೋಟರಿ ಕ್ಲಬ್ ಬ್ರಹ್ಮಾವರ , ಜೈಂಟ್ಸ್ ಗ್ರೂಪ್ ಬ್ರಹ್ಮಾವರ, ರೆಡ್‌ಕ್ರಾಸ್ ಯುನಿಟ್ ಬ್ರಹ್ಮಾವರ, ವಿಷನ್ ಅಪ್ಪು ಟ್ರಸ್ಟ್ ಬ್ರಹ್ಮಾವರ, ಕರ್ನಾಟಕ ಬ್ಯಾಂಕ್ ಉಪ್ಪಿನಕೋಟೆ ಬ್ರಾಂಚ್ ಇವರೆಲ್ಲರ ಸಹಯೋಗದಲ್ಲಿ ದಿನಾಂಕ 29.08.2026 ಶನಿವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

Play for Nation, Donate for Life ಎಂಬ ಆಶಯದೊಂದಿಗೆ ಆಯೋಜಿಸಲಾದ .ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ರಕ್ತದಾನದ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರೊಂದಿಗೆ, ಅಗತ್ಯವಿರುವವರಿಗೆ ನೆರವಾಗುವ ಮಾನವೀಯ ಮನೋಭಾವವನ್ನು ಬೆಳೆಸುವುದು ಶಿಬಿರದ ಉದ್ದೇಶವಾಗಿತ್ತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀ ರಮೇಶ್ ವೈದ್ಯ ಅವರು, ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ, ತಂಡದ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಯುವಜನರು ಕ್ರೀಡೆಯೊಂದಿಗೆ ರಕ್ತದಾನದಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓ ಎಸ್ ಸಿ ಎಜ್ಯುಕೇಷನಲ್ ಸೊಸೈಟಿ, ಬ್ರಹ್ಮಾವರದ ಅಧ್ಯಕ್ಷರಾದ ರೆ. ಫಾ. ಎಂ.ಸಿ. ಮಥಾಯಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇದರ ಅಧ್ಯಕ್ಷರಾದ ಲಯನ್ ಗ್ರೆಗೊರಿ ಡಿ’ಸಿಲ್ವಾ, ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ರೊಟೇರಿಯನ್ ಪ್ರಮೋದ್ ಶೆಟ್ಟಿ, ಜೈಂಟ್ಸ್ ಗ್ರೂಪ್ ಬ್ರಹ್ಮಾವರದ ಪ್ರತಿನಿಧಿಯಾಗಿ ಶ್ರೀ ಸುಂದರ್ ಪೂಜಾರಿ, ರೆಡ್ ಕ್ರಾಸ್ ಘಟಕ ಬ್ರಹ್ಮಾವರದ ಅಧ್ಯಕ್ಷ ರೊಟೇರಿಯನ್ ಉದಯ ಕುಮಾರ್ ಶೆಟ್ಟಿ, ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಅಧ್ಯಕ್ಷ ರೋಟೇರಿಯನ್ ಮಧುಸೂದನ್, ಡೈಮಂಡ್ ಫಿಟ್ನೆಸ್‌ ಬ್ರಹ್ಮಾವರ ಇದರ ಮಾಲೀಕರಾದ ಶ್ರೀ ಮಹೇಶ್ ಸುವರ್ಣ, ಮಯೂರ್ ಫ್ಲೆಕ್ಸ್‌ನ ಮಾಲೀಕರಾದ ರೊಟೇರಿಯನ್ ಮಧುಸೂದನ್ ಮಲ್ಪೆ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರೊ. ಸಖರಾಮ್ ಸೋಮಯಾಜಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಉಪಸ್ಥಿತರಿದ್ದರು. ಹಾಗೆಯೇ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ಉಡುಪಿ ಜಿಲ್ಲೆಯ ಕಾಲೇಜುಗಳ ಕ್ರೀಡಾ ಸಾಧನೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರವು ಅಗ್ರ ಸ್ಥಾನದಲ್ಲಿದ್ದು, ಆ ಸಾಧನೆಗೆ ಸಹಕರಿಸಿದ ಕಾಲೇಜಿನ ಸಾಧಕ ಕ್ರೀಡಾಪಟುಗಳಿಗೆ ಈ ಸಂದರ್ಭದಲ್ಲಿ ಓ ಎಸ್ ಸಿ ಎಜ್ಯುಕೇಷನಲ್ ಸೊಸೈಟಿಯ ವತಿಯಿಂದ ಸುಮಾರು ₹ 60,000 ಪ್ರೋತ್ಸಾಹಧನವನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಬರ್ಟ್ ರೋಡ್ರಿಗಸ್ ಜೆ., ಐ ಕ್ಯೂ ಎ ಸಿ ಸಂಯೋಜಕರಾದ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ ಎ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಪದಾಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಕಾರ್ಯದರ್ಶಿ ದಿವ್ಯ ಜ್ಯೋತಿ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲರಾದ ಡಾ. ರೋಬರ್ಟ್ ರೋಡ್ರಿಗಸ್ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ವಿಘ್ನಶ್ ಉದ್ಘಾಟಕರನ್ನು ಪರಿಚಯಿಸಿ ಹಾಗೂ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ ಇವರು ವಂದಿಸಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ ಭರತ್ ರಾಜ್ ಎಸ್ ನೇಜರ್ ಇವರು ಪ್ರೋತ್ಸಾಹಧನ ವಿತರಣಾ ಕಾರ್ಯವನ್ನು ನಿರ್ವಹಿಸಿದರು 

ಕ್ರೀಡಾ ಸ್ಫೂರ್ತಿ, ಆರೋಗ್ಯ ಜಾಗೃತಿ ಮತ್ತು ರಕ್ತದಾನದ ಮೂಲಕ ಮಾನವೀಯ ಸೇವೆಯ ಸಂದೇಶವನ್ನು ಸಾರಿ ಸುಮಾರು 90 ವಿದ್ಯಾರ್ಥಿಗಳು ರಕ್ತದಾನ ನೀಡಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.





No comments: