ಎಸ್. ಎಮ್. ಎಸ್ ಕಾಲೇಜು, ಬ್ರಹ್ಮಾವರದ NSS ಘಟಕದ ವತಿಯಿಂದ ಆಟಿ ಖಾದ್ಯ ಕಾರ್ಯಕ್ರಮವನ್ನು 28 ಆಗಸ್ಟ್ 2026ರಂದು ಆಯೋಜಿಸಲಾಯಿತು.ಆಟಿ ತಿಂಗಳ ವಿಶೇಷತೆ ಹಾಗೂ ನಮ್ಮ ಕರಾವಳಿ ಭಾಗದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾದ ವಿವಿಧ ಆಟಿ ಖಾದ್ಯಗಳನ್ನು ಕಾಲೇಜಿಗೆ ತಂದು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಖಾದ್ಯಗಳ ತಯಾರಿಕೆಯ ವಿಧಾನ, ಅದರಲ್ಲಿರುವ ಪೌಷ್ಟಿಕಾಂಶ ಹಾಗೂ ಆಟಿ ತಿಂಗಳಲ್ಲಿ ಅವುಗಳ ಮಹತ್ವದ ಕುರಿತು ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರಸನ್ನ ಶೆಟ್ಟಿ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು. NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಹಾಗೂ ಡಾ. ಮಂಜುನಾಥ್ ಉಡುಪ, NSS ಸಹಾಯಕ ಕಾರ್ಯಕ್ರಮಾಧಿಕಾರಿಯಾದ ಕುಮಾರಿ ನಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಮ್ಮ ಕರಾವಳಿ ಸಂಸ್ಕೃತಿ, ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಸ್ಥಳೀಯ ಆಹಾರ ಪರಂಪರೆಯ ಬಗ್ಗೆ ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.

No comments:
Post a Comment