ಎಸ್. ಎಂ. ಎಸ್. ಕಾಲೇಜು : ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ
ಬ್ರಹ್ಮಾವರ: ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್ ಆರ್ ರಂಗನಾಥನ್‌ರವರ ಜನ್ಮದಿನದ ಪ್ರಯುಕ್ತ ಇಲ್ಲಿನ ಎಸ್.ಎಂ.ಎಸ್. ಕಾಲೇಜಿನಲ್ಲಿ ದಿನಾಂಕ ೧೨-೦೮-೨೦೨೪ ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪರವರು ರಂಗನಾಥನ್‌ರವರ ಛಾಯಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಛೇರಿ ಅಧೀಕ್ಷಕಿ ಶ್ರೀಮತಿ ಸೆಲಿನ್ ಬಾಂಜ್, ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಂಥಪಾಲಕಿ ಶ್ರೀಮತಿ ಸುರೇಖಾ, ಗ್ರಂಥಾಲಯ ಸಹಾಯಕರಾದ ಶ್ರೀ ಸತೀಶ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಶ್ರೀಮತಿ ಪ್ರಮೀಳ ಡಿಸಿಲ್ವ ಕಾರ್ಯಕ್ರಮವನ್ನು ಆಯೋಜಿಸಿದ್ದರು.
No comments:
Post a Comment