ಎನ್.ಎಸ್.ಎಸ್: "ಮಾಹಿತಿ ಕಾರ್ಯಗಾರ"
16/09/2023 ರ ಶನಿವಾರದಂದು ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2023-24 ರ ಸಾಲಿನ ಎನ್.ಎಸ್.ಎಸ್. ಘಟಕಗಳ "ಮಾಹಿತಿ ಕಾರ್ಯಗಾರ" ಕಾರ್ಯಕ್ರಮವನ್ನು ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ. ಇವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಶ್ರೀ ಮಧುಸುದನ್ ದೇವಾಡಿಗ ಇವರು ಆಗಮಿಸಿ ಎನ್.ಎಸ್.ಎಸ್ ನಲ್ಲಿ ವ್ಯಕ್ತಿತ್ವ ವಿಕಸನದ ಬಗ್ಗೆ ಹಲವು ಮಾಹಿತಿಗಳನ್ನು ಹಾಗೂ ಎನ್. ಎಸ್. ಎಸ್. ನಲ್ಲಿ ತಮ್ಮ ಅನುಭವವನ್ನು ನಮ್ಮಲ್ಲಿ ಹಂಚಿಕೊಂಡರು. ಎನ್. ಎಸ್. ಎಸ್. ಘಟಕಗಳ ಯೋಜನಾಧಿಕಾರಿಗಳಾದ ಮಮತಾ ಮೇರಿ ಅಮ್ಮನಾ ಹಾಗೂ ಪ್ರಸನ್ನ ಶೆಟ್ಟಿ ಮತ್ತು ಎನ್.ಎಸ್.ಎಸ್. ಘಟಕಗಳ ಸಹಯೋಜನಾಧಿಕಾರಿಗಳಾದ ಪ್ರಕಾಶ್ ನಾಯ್ಕ ಹಾಗೂ ಸುಪ್ರೀತಾ , ಹಾಗೆಯೇ ಕಾಲೇಜಿನ ಹಳೇವಿದ್ಯಾರ್ಥಿಗಳಾದ ಕಾರ್ತಿಕ್, ರಾಜೇಶ್ ಮತ್ತು ಸಮರ್ಥ್ ಇವರು ಉಪಸ್ಥಿತರಿದ್ದರು.
No comments:
Post a Comment