-->

⚡ Latest News ⚡

Upcoming Events : 🔥 🔴 MAHA SANGAMA - Alumini Association 🟩 Semester Exam✍️ Competitive Exam Training

Saturday, October 14, 2023

ಎನ್.ಎಸ್.ಎಸ್. ಘಟಕಗಳ "ಉದ್ಘಾಟನ ಸಮಾರoಭ

 

ಎನ್.ಎಸ್.ಎಸ್. ಘಟಕಗಳ  "ಉದ್ಘಾಟನ ಸಮಾರoಭ

10/10/2023 ರ ಮಂಗಳವಾರದಂದು ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2023-24 ರ ಸಾಲಿನ ಎನ್.ಎಸ್.ಎಸ್. ಘಟಕಗಳ  "ಉದ್ಘಾಟನ ಸಮಾರಭದ" ಕಾರ್ಯಕ್ರಮವನ್ನು  ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

 ಉದ್ಘಾಟನ ಸಮಾರಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ  ಡಾ. ಮಂಜುನಾಥ ಉಡುಪ ಕೆ. ಇವರು ವಹಿಸಿಕೊಂಡಿದ್ದರು. *ಉದ್ಘಾಟಕರಾಗಿ ಶ್ರೀಯುತ ನಾಗರಾಜ್.ಜಿ.ಎಸ್, ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ* ಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ *ಎನ್. ಎಸ್. ಎಸ್. ನ ಬಣ್ಣಗಳ ಮಹತ್ವ ಹಾಗೂ ಜೀವನದಲ್ಲಿ ಉದಾಸೀನ ಮಾಡದೆ ಉತ್ಸಾಹಕರಾಗಿ ಯಾವುದೇ ಕೆಲಸ ಕೊಟ್ಟರು ನಾನು ಮಾಡಿಯೇ ತೀರುತ್ತೇನೆ ಎನ್ನುವಂತಹ  ಆತ್ಮವಿಶ್ವಾಸ ಜೀವನದಲ್ಲಿ ಇರಬೇಕು ಎನ್ನುವ ಅಮೂಲ್ಯವಾದ ಮಾಹಿತಿಯನ್ನು ತಿಳಿಸಿಕೊಟ್ಟರು.* ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಘಟಕಗಳ ಯೋಜನಾಧಿಕಾರಿಗಳಾದ ಮಮತಾ ಮೇರಿ ಅಮ್ಮನಾ ಹಾಗೂ ಪ್ರಸನ್ನ ಶೆಟ್ಟಿ , ಎನ್.ಎಸ್.ಎಸ್. ಘಟಕಗಳ ಸಹಯೋಜನಾಧಿಕಾರಿಯಾದ  ಸುಪ್ರೀತಾ ನಮ್ಮ ಕಾಲೇಜಿನ ಉಪನ್ಯಾಸಕ - ಉಪನ್ಯಾಸಕೇತರ ವೃಂದದವರು,

ಹಾಗೆಯೇ ನಮ್ಮ ಕಾಲೇಜಿನ 2022-23 ರ ಸಾಲಿನ ಎನ್. ಎಸ್ ಎಸ್. ನ ಹಿರಿಯ ನಾಯಕರು ಉಪಸ್ಥಿತರಿದ್ದರು.


ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತವನ್ನು ಅಂಕಿತಾ, ಉದ್ಘಾಟಕರ ಪರಿಚಯವನ್ನು ಶಿಲ್ಪ, ಪ್ರತಿಜ್ಞಾ ವಿಧಿಯನ್ನು ಯಜ್ನೇಶ್, ಧನ್ಯವಾದವನ್ನು ಸುದರ್ಶನ್ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಸ್ನೇಹ ಮತ್ತು ಶಶಾಂಕ್ ಇವರು ನೆರವೇರಿಸಿಕೊಟ್ಟರು.

No comments:

ಮಹಾಸಂಗಮ -2024