ಕ್ಯಾನ್ಸರ್ ಅರಿವು " ಕಾರ್ಯಕ್ರಮ
ದಿನಾಂಕ: 09/03/2024 ರ ಶನಿವಾದಂದು ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2023-24 ರ ಸಾಲಿನ ಎನ್.ಎಸ್.ಎಸ್. ಘಟಕ ಮತ್ತು ಯುತ್ ರೆಡ್ ಕ್ರಾಸ್ ಇವರ ಸಹಯೋಗದಲ್ಲಿ *"ಕ್ಯಾನ್ಸರ್ ನ ಬಗ್ಗೆ ಅರಿವು ಮೂಡಿಸುವ"* ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಉಡುಪ ಕೆ. ಇವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಡಾ. ಅನಂತ್. ಪೈ. ಪ್ರೊಫೆಸರ್, ವೈದ್ಯಕೀಯ ಆಂಕೊಲಜಿ ವಿಭಾಗ, ಕೆ.ಎಮ್.ಸಿ. ಮಣಿಪಾಲ, ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಅಂದರೆ ಏನು? ಅದು ಒಬ್ಬ ಮನುಷ್ಯನಲ್ಲಿ ಹೇಗೆ ಹಂತ ಹಂತವಾಗಿ ಕಂಡುಬರುತ್ತದೆ. ಇತ್ತೀಚೆಗೆ ನಾವು ಸೇವಿಸುವ ಆಹಾರ ಪದಾರ್ಥಗಳು ಹೇಗೆ ನಮ್ಮ ದೇಹದಲ್ಲಿ ಪರಿಣಾಮವನ್ನು ಉಂಟುಮಾಡಿ ಕ್ಯಾನ್ಸರ್ ಕಂಡುಬರುವುದನ್ನು ತಿಳಿಸಿ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆ ಬಂದಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಘಟಕಗಳ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಮತ್ತು ಶ್ರೀ ಪ್ರಸನ್ನ ಶೆಟ್ಟಿ ಸಹಯೋಜನಾಧಿಕಾರಿಗಳಾದ ಕು . ಸುಪ್ರೀತಾ ಮತ್ತು ಯುತ್ ರೆಡ್ ಕ್ರಾಸ್ ನ ನಿರ್ದೇಶಕರಾದ. ಶ್ರೀ ಆಲ್ಫ್ರೆಡ್ ಹಾಗೆಯೇ ಪ್ರಥಮ ಮತ್ತು ದ್ವಿತೀಯ ವರ್ಷದ ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಯುತ್ ರೆಡ್ ಕ್ರಾಸ್ ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶಿಲ್ಪ, ವ್ಯಕ್ತಿ ಪರಿಚಯವನ್ನು ಸ್ನೇಹ, ಧನ್ಯವಾದವನ್ನು ಯಜ್ನೇಶ್ ಮತ್ತು ಸುದರ್ಶನ್ ಹಾಗೂ ವಿದ್ಯಾ ಇವರಿಂದ ಕಾರ್ಯಕ್ರಮ ನಿರೂಪಣೆಗೊಂಡಿತು.
No comments:
Post a Comment