ಎಸ್ ಎಮ್ ಎಸ್ ಕಾಲೇಜು : ಸಿ ಪಿ ರ್ ಮಾಹಿತಿ ಕಾರ್ಯಗಾರ
ದಿನಾಂಕ:09/09/2025 ರ ಮಂಗಳವಾರದಂದು ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2024-25 ರ ಸಾಲಿನ ಮಾನವಿಕ ಸಂಘ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಸಹಯೋಗದಲ್ಲಿ "ಸಿ ಪಿ ರ್ ಮಾಹಿತಿ "ಕಾರ್ಯಗಾರ ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಜೆ. ಇವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಮಿಲಿಟ ಶಾಲಿನಿ ಅಸಿಸ್ಟಂಟ್ ಪ್ರೊಫೆಸರ್, ನರ್ಸಿಂಗ್ ವಿಭಾಗ, ಕೆ.ಎಮ್.ಸಿ. ಮಣಿಪಾಲ, ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಸಿ ಪಿ ರ್ ವಿಷಯದ ಬಗ್ಗೆ ಅರಿವು ಮೂಡಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆ ಯಾವ ರೀತಿಯಲ್ಲಿ ಕೊಡಬಹುದು ಎಂಬ ಬಗ್ಗೆ ದೃಶ್ಯ ಪ್ರಸ್ತುತಿ ಮಾಹಿತಿಯನ್ನು ತಿಳಿಸಿದರು. ಹಾಗೂ ಈ ಕಾರ್ಯಕ್ರಮದಲ್ಲಿ ಮಾನವೀಯ ಸಂಘದ ಸಂಯೋಜಕರಾದ ಶ್ರೀಮತಿ
ಹೆಲ್ಮಿನಾ ಮೇರಿ ಮಮತಾ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಸಹ ನಿರ್ದೇಶಕಿ ಯಾಗಿರುವ ಕುಮಾರಿ ಸುಪ್ರೀತಾ ಮತ್ತು ಮಾನವಿಕ ಸಂಘದ ಕಾರ್ಯದರ್ಶಿಗಳು ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಉಪಾಧ್ಯಕ್ಷ ಮತ್ತು ಉಪಾಧ್ಯಕ್ಷೆ ಎಲ್ಲಾ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ತೃಪ್ತಿ, ವ್ಯಕ್ತಿ ಪರಿಚಯವನ್ನು ರೆಹೆನಾ ಭಾನು, ಧನ್ಯವಾದವನ್ನು ಪವನ್ ಮತ್ತು ಲಕ್ಷಿತ ಇವರಿಂದ ಕಾರ್ಯಕ್ರಮ ನಿರೂಪಣೆಗೊಂಡಿತು.
No comments:
Post a Comment