⚡ Latest News ⚡

Upcoming Events : 🔥 🔴🔥 Cooking with fire, Talents Day, Sports Day🔥

Sunday, April 12, 2026

ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ' ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ


ಬ್ರಹ್ಮಾವರ ಎಸ್ ಎಮ್ ಎಸ್ ಕಾಲೇಜು ಆಂತರಿಕ ಗುಣಮಟ್ಟದ ಖಾತರಿಕೋಶ ಕನ್ನಡ ವಿಭಾಗ ಹಾಗೂ ಮಂಗಳೂರು ವಿ ವಿ ಕನ್ನಡ ಅಧ್ಯಾಪಕರ ಸಂಘದ ಸಹಯೋಗದಲ್ಲಿ ' ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ' ಎನ್ನುವ ವಿಷಯದಲ್ಲಿ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವು ದಿನಾಂಕ 7/4/2026 ರಂದು ಕಾಲೇಜಿನ ರೆ. ಫಾ. ಪಿ. ಜಿ ಕೊಶಿ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ದಿಕ್ಸುಚಿ ಭಾಷಣ ಮಾಡಿದ ತುಳು ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಪ್ರೊ. ಕೆ.ಚಿನ್ಮಪ್ಪ ಗೌಡ ರವರು ಮಾನವೀಯತೆಯನ್ನು ವ್ಯಾಖ್ಯಾನಕ್ಕೆ ಒಳಪಡಿಸುವುದು ಸುಲಭವಲ್ಲ ಇಂದು ನಾವು ಮಾನವೀಯತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ ಯಾಕೆಂದರೆ ಇಂದು ಯುದ್ಧದಿಂದ ಸಾವಿರಾರು ಮಂದಿ ಸಾಯುತ್ತಿದ್ದರು ನಮಗೇನು ಅನ್ನಿಸುತ್ತಿಲ್ಲ ಎಂದರು. ಪಂಪನ " ಮನುಷ್ಯ ಜಾತಿ ತಾನೊಂದೇ ವಲಂ " ಬಸವಣ್ಣನ "ದೇಹವೇ ದೇಗುಲ " ಪ್ರತಿಪಾದನೆಗಳು ಮಾನವೀಯತೆಯ ದೃಷ್ಟಾಂತ ಗಳು ಎಂದುಬಣ್ಣಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ರೆ. ಫಾ. ಎಮ್ ಸಿ ಮಾಥಾಯಿ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಎಸ್. ವಿ . ಪಿ ಕನ್ನಡಅಧ್ಯಯನ ಕೇಂದ್ರದ ಅಧ್ಯಕ್ಷರಾಗಿರುವ ಪ್ರೊ. ನಾಗಪ್ಪ ಗೌಡ,ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್.ಜೆ ಹಾಗೂ ಐ ಕ್ಯು ಎ ಸಿ ಸಂಯೋಜಕರಾದ ಲೆಫ್ಟಿಂನೆಂಟ್ ಅಶ್ವಿನ್ ಶೆಟ್ಟಿ.ಎ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿದ್ಯಾಲತಾ ಸ್ವಾಗತಿಸಿದರು ವಿಕಾಸದ ಅಧ್ಯಕ್ಷರಾದ ಡಾ ಚಿನ್ನಸ್ವಾಮಿ ಎನ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಡಾ. ಮಾಧವ ಎಮ್. ಕೆ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಉಪನ್ಯಾಸಕರಾದ ಪ್ರಶಾಂತ್ ಶೆಟ್ಟಿ ಧನ್ಯವಾದಗಳನ್ನು ಅರ್ಪಿಸಿದರು.ಧವಳ ಕಾಲೇಜು ಮೂಡುಬಿದರೆ ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು

No comments: