ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರ ಐ. ಕ್ಯು. ಎ. ಸಿ ಹಾಗೂ ಭಾಷಾ ವಿಭಾಗ ಇವರ ಆಶ್ರಯದಲ್ಲಿ ಜ್ಞಾನ ಸಂಗಮ ಟ್ರಸ್ಟ್ (ರಿ ) ಬ್ರಹ್ಮಾವರ ಇವರ ಸಹಯೋಗದೊಂದಿಗೆ "ಯುವ ಕರಾವಳಿ " ಕನ್ನಡ ಪ್ರಾಕ್ಷಿಕ ಪತ್ರಿಕೆಯಾ ಉದ್ಘಾಟನಾ ಸಮಾರಂಭವು ಎಸ್. ಎಮ್. ಎಸ್ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 5-11-2025 ಮಧ್ಯಾಹ್ನ 2 ಗಂಟೆಗೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲಾರದ ಡಾ. ರೋಬರ್ಟ್ ರೋಡ್ರಿಗಸ್. ಜೆ ಯವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಎಸ್. ಎಮ್. ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವೈ.ರವೀಂದ್ರನಾಥ ರಾವ್ ಮತ್ತು ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ ಇಲ್ಲಿನ ನಿವೃತ್ತ ಪ್ರಾಂಶುಪಾಲರೂ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರು ಆಗಿದ್ದ ಡಾ. ಸುಕನ್ಯ ಮೇರಿ. ಜೆ ಯವರು ಉಪಸ್ಥಿತರಿದ್ದರು. ಯುವ ಕರಾವಳಿ ಪತ್ರಿಕೆಯ ಸಂಪಾದಕರಾದ ಶ್ರೀ ಮಹೇಶ ತಡೆಕಲ್ಲು ಅವರು ಇದ್ದರು. ಪತ್ರಿಕೆ ಅನಾವರಣವನ್ನು ಡಾ
ವೈ ರವೀಂದ್ರನಾಥ್ ರಾವ್ ಮಾಡಿ ಮಾತನಾಡಿದರು. ಡಾ. ಸುಕನ್ಯಾ ಮೇರಿ. ಜೆ. ಅವರು ಶುಭ ಹಾರೈಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಡಾ. ರಾಬರ್ಟ್ ರೋಡ್ರಿಗಸ್. ಜೆ. ಅವರು ಅಧ್ಯಕ್ಷೀ ಯ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ವಿದ್ಯಾಲತಾ ಸ್ವಾಗತಿಸಿದರು. ಜ್ಞಾನ ಸಂಗಮ ಟ್ರಸ್ಟಿನ ಸದಸ್ಯರಾದ ವೈಶಾಲಿಯವರು ಧನ್ಯವಾದ ಸಮರ್ಪಿಸಿದರು. ಸಿಂಚನ ತೃತೀಯ ಬಿಕಾಂ ಕಾರ್ಯಕ್ರಮ ನಿರೂಪಿಸಿದರು. ಚಂದನ ಪ್ರಥಮ ಬಿ ಕಾಂ ಪ್ರಾರ್ಥನೆ ಮಾಡಿದರು.











