ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆ – 2025.
ಬ್ರಹ್ಮಾವರ, 30/10/2025 – ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರದಲ್ಲಿ ಐ.ಕ್ಯೂ.ಎ.ಸಿ ಮತ್ತು ಲಲಿತಾ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಗೀತ ಸ್ಪರ್ಧೆ – 2025 ಭವ್ಯವಾಗಿ ನೆರವೇರಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸಿದ್ಧ ನಟ, ರಂಗ ನಿರ್ದೇಶಕ ಹಾಗೂ ಸಂಚಾಲಕರಾದ ಶ್ರೀಯುತ ಬಿ.ಎಸ್. ರಾಮ್ ಶೆಟ್ಟಿ (ಭೂಮಿಕಾ [ರಿ.], ಹಾರಾಡಿ) ನೆರವೇರಿಸಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಸಂಚಾಲಕರಾದ ರೆ|ಫಾ| ಎಂ.ಸಿ. ಮಥಾಯಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂಗೀತ ಸ್ಪರ್ಧೆಗೆ ತೀರ್ಪುಗಾರರಾಗಿ ಶ್ರೀಯುತ ಪ್ರದೀಪ್ ಶಾಂತಿ ಕುಕ್ಕುಡೆ ಹಾಗೂ ವಿದುಷಿ ಅನುರಾಧ ಮಯ್ಯ ಅವರು ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ ಸುಮಾರು ಒಂಭತ್ತು ಕಾಲೇಜುಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡು, ವೈಯಕ್ತಿಕ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಭಾವಗೀತೆ, ಜಾನಪದ ಗೀತೆ ಹಾಗೂ ಸಮೂಹ ವಿಭಾಗದಲ್ಲಿ ದೇಶಭಕ್ತಿ ಗೀತೆಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಸ್ವಾಗತಿಸಿ, ವಿದ್ಯಾರ್ಥಿನಿ ಕುಮಾರಿ ರೆಹೇನಾ ಬಾನು ವಂದಿಸಿದರು.
ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀಯುತ ಪ್ರದೀಪ್ ಶಾಂತಿ ಕುಕ್ಕುಡೆ ಉಪಸ್ಥಿತರಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿ ಕುಮಾರಿ ದೀಪ್ತಿ ಸ್ವಾಗತಿಸಿ, ಉಪನ್ಯಾಸಕ ಪ್ರಶಾಂತ್ ದೇವಾಡಿಗ ವಂದಿಸಿದರು.ಕಾರ್ಯಕ್ರಮವನ್ನು ಕುಮಾರಿ ಚಂದನ ಮತ್ತು ಸುಪ್ರೀತಾ ಯಶಸ್ವಿಯಾಗಿ ನಿರೂಪಿಸಿದರು.
*ಪ್ರಶಸ್ತಿ ವಿಜೇತರು*
*ಶಾಸ್ತ್ರೀಯ ಸಂಗೀತ:* ಪ್ರಥಮ ಬಹುಮಾನ: ಎಂ. ಜಿ ಎಂ ಕಾಲೇಜು ಉಡುಪಿ, ದ್ವೀತಿಯ ಪೂರ್ಣ ಪ್ರಜ್ಞಾ ಸಂದ್ಯ ಕಾಲೇಜು, ಉಡುಪಿ ಹಾಗೂ ತ್ರತೀಯ ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ.
*ಭಾವಗೀತೆ:* ಪ್ರಥಮ ಎಂ. ಜಿ ಎಂ ಕಾಲೇಜು ಉಡುಪಿ, ದ್ವೀತಿಯ ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ.ಹಾಗೂ ತ್ರತೀಯ ಪೂರ್ಣ ಪ್ರಜ್ಞಾ ಸಂದ್ಯ ಕಾಲೇಜು, ಉಡುಪಿ.
*ಜನಪದ ಗೀತೆ:* ಪ್ರಥಮ ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ದ್ವೀತಿಯ ಎಂ. ಜಿ ಎಂ ಕಾಲೇಜು ಉಡುಪಿ, ತೃತೀಯ ಪೂರ್ಣ ಪ್ರಜ್ಞಾ ಸಂದ್ಯ ಕಾಲೇಜು, ಉಡುಪಿ.
*ದೇಶಭಕ್ತಿಗೀತೆ:* ಪ್ರಥಮ ಎಂ. ಜಿ ಎಂ ಕಾಲೇಜು ಉಡುಪಿ, ದ್ವೀತಿಯ ಕ್ರಾಸ್ಲಾಂಡ್ ಕಾಲೇಜು ಬ್ರಹ್ಮಾವರ, ತೃತೀಯ ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ.

No comments:
Post a Comment