ಬ್ರಹ್ಮಾವರ: ಇಲ್ಲಿನ ಸೈಂಟ್ ಮೇರಿಸ್ ಸಿರಿಯನ್ ಕಾಲೇಜಿನಲ್ಲಿ ದಿನಾಂಕ 12.08.2023ರಂದು "ರಾಷ್ಟ್ರೀಯ ಗ್ರಂಥಪಾಲಕರ" ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. "ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಗ್ರಂಥಾಲಯದ ಪಾತ್ರ ಬಹಳ ಮುಖ್ಯವಾದದ್ದು, ಗ್ರಂಥಾಲಯ ಬೆಳೆದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾದಂತೆ" ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀ ಅಲ್ವರಿಸ್ ಡಿಸಿಲ್ವ, ಖಾಜಾಂಚಿ ಶ್ರೀ ಜೋಯ್ಸನ್ ರೋಡ್ರಿಗಸ್, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಆಲ್ಬರ್ಟ್ ರೋನಿ ಡಿಸಿಲ್ವ, ಕಛೇರಿ ಅಧಿಕ್ಷಕರಾದ ಶ್ರೀಮತಿ ಸೆಲಿನ ಬಾಂಜ್, ಗ್ರಂಥಾಲಯ ಸಿಬ್ಬಂದಿ ವರ್ಗದವರಾದ ಶ್ರೀ ಸತೀಶ, ಶ್ರೀಮತಿ ಪ್ರಮೀಳಾ ಡಿಸಿಲ್ವ, ಶ್ರೀಮತಿ ಎಸ್ತೆಫಿನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಗ್ರಂಥಪಾಲಕಿ ಶ್ರೀಮತಿ ಸುರೇಖಾ ಕಾರ್ಯಕ್ರಮವನ್ನು ನಿರೂಪಿಸಿದರು.
No comments:
Post a Comment