⚡ Latest News ⚡

Upcoming Events : "🔥 🔴 Placement Drive", "🟩 Traditional DAY", "💻 IT Fest", "📊 Commerce Fest", "🌍 Humanity Fest", "🚌 Study Tour", "✍️ Competitive Exam Training", "🏏 Inter Collegiate Cricket"

Wednesday, September 27, 2023

ವಿಶ್ವ ಪ್ರವಾಸೋದ್ಯಮ ದಿನಾಚರಣೆ :ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು'

 

ವಿಶ್ವ ಪ್ರವಾಸೋದ್ಯಮ ದಿನಾಚರಣೆ :ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು' 

ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಉಡುಪಿ, ಪ್ರವಾಸೋದ್ಯಮ ಇಲಾಖೆ ಉಡುಪಿ ಇದರ ಆಶ್ರಯದಲ್ಲಿ ನಗರದ ಟೌನ್ ಹಾಲ್ ನಲ್ಲಿ  27.09.2023ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಜರುಗಿದ   'ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು' ಎಂಬ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಎಸ್.ಎಮ್.ಎಸ್. ಕಾಲೇಜು ಬ್ರಹ್ಮಾವರದ ಇತಿಹಾಸ ಮತ್ತು ಪುರಾತತ್ವ ವಿಭಾಗದ  ಅಂತಿಮ ಬಿ.ಎಯ 20 ವಿದ್ಯಾರ್ಥಿಗಳು ಪಾಲ್ಗೊಂಡು, ಕರಾವಳಿ ಭಾಗದ ಪ್ರವಾಸೋದ್ಯಮದ ಮಹತ್ವವನ್ನು ಹಾಗೂ ಸಾಂಸ್ಕೃತಿಕ ಪರಂಪರೆಯ ವಿಶೇಷತೆಗಳನ್ನು ತಿಳಿದುಕೊಂಡರು. 


ಹಾಗೆಯೇ ಕಾರ್ಯಕ್ರಮದ ತರುವಾಯ ವಿದ್ಯಾರ್ಥಿಗಳು ಉಡುಪಿಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ನಾಣ್ಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ನಾಣ್ಯಶಾಸ್ತ್ರಜ್ಞ  ಹಾಗೂ ಕ್ಯುರೇಟರ್ ಶ್ರೀಯುತ ಜಯಪ್ರಕಾಶ್ ರವರ ಮಾರ್ಗದರ್ಶನದಲ್ಲಿ ಭಾರತ ಹಾಗೂ ಅಂತರಾಷ್ಟ್ರೀಯ  ನಾಣ್ಯಗಳ ವಿಶೇಷತೆ ಮತ್ತು ಮಹತ್ವವನ್ನು ಅರಿತುಕೊಂಡರು.

No comments: