The Inauguration Ceremony of the College Student Council 2023-24
ಎಸ್. ಎಮ್. ಎಸ್. ಕಾಲೇಜು ಬ್ರಹ್ಮಾವರ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ
ಎಸ್. ಎಮ್. ಎಸ್. ಕಾಲೇಜು ಬ್ರಹ್ಮಾವರ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 13/9/2023 ರಂದು ಡಾ. ಬಿ. ವಸಂತ ಶೆಟ್ಟಿ ಸ್ಮಾರಕ ರಂಗ ಮಂಟಪದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ರೇ. ಫಾದರ್ ಎಮ್. ಸಿ. ಮಾತಾಯಿ ಅವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ವಿವೇಕ ಪದವಿಪೂರ್ವ ಕಾಲೇಜು ಕೋಟ ಇಲ್ಲಿನ ಪ್ರಾಂಶುಪಾಲರಾಗಿರುವ ಶ್ರೀಯುತ ಜಗದೀಶ್ ನಾವಡ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾಗಿರುವ ಡಾ. ವಿದ್ಯಾಲತಾ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಮಂಜುನಾಥ ಉಡುಪ ಕೆ , ಕಾಲೇಜು ವಿಭಾಗದ ಕಾರ್ಯದರ್ಶಿಗಳಗಿರುವ ಅಲ್ವಾರೀಸ್ ಡಿ, ಸಿಲ್ವ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಅವನಿಶ್ ಸ್ವಾಗತಿಸಿದರು, ಉಪನಾಯಕಿ ಅಪೂರ್ವ ಅತಿಥಿಗಳ ಪರಿಚಯ ಮಾಡಿದರು, ಉಪನಾಯಕ ಪ್ರತೀಕ್ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು. ಕಾರ್ಯದರ್ಶಿ ಮೇಘನಾ ಪೈ ಧನ್ಯವಾದ ನೀಡಿದರು. ನಿಸರ್ಗ ಕಾರ್ಯಕ್ರಮವನ್ನು ನಿರೂಪಿಸಿದರು
No comments:
Post a Comment