ಮಹಾಸಂಗಮ -2024
ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಮಹಾಸಂಗಮ- 2024 ಡಿಸೆಂಬರ್ 15 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು . ಕಾರ್ಯಕ್ರಮದಲ್ಲಿ ಕಾಲೇಜನ್ನು ಕಟ್ಟುವಲ್ಲಿ ಸಹಕರಿಸಿದ ಮಹನೀಯರಿಗೆ ಪ್ರಥಮ ಹಂತದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾದ ಪ್ರೊ.ಎಮ್ ಸಿ ನೈನಾನ್ ಹಾಗೂ ಶ್ರೀ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ದುಬೈ,ಮುಂಬೈ, ಬೆಂಗಳೂರು ಹಾಗೂ ಅಂತರಾಷ್ಟ್ರೀಯ ಹಳೆ ವಿದ್ಯಾರ್ಥಿ ಸಂಘದ ಚಾಪ್ಟರ್ ಪ್ರಾರಂಭಿಸಲು ಮತ್ತು ಅಸ್ತಿತ್ವದಲ್ಲಿರುವ ಸಂಘವನ್ನು ಸದೃಢ ಪಡಿಸಲು ನಿರ್ಧರಿಸಲಾಯಿತು. ಅನೇಕ ಹಳೆ ವಿದ್ಯಾರ್ಥಿಗಳು ಕಾಲೇಜಿಗೆ ಸ್ಮಾರ್ಟ್ ಕ್ಲಾಸ್ ,ಪ್ರೊಜೆಕ್ಟರ್ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಗೆ ,ಶುಲ್ಕ ಸಂಬಂಧಿತ ವಿಷಯಗಳಿಗೆ ಸಹಕರಿಸಲು ಮುಂದಾದರು .
ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.ಓ ಎಸ್ ಸಿ ಎಜುಕೇಶನ್ ಸೊಸೈಟಿ ಬ್ರಹ್ಮಾವರದ ಸಂಚಾಲಕರಾದ ರೇ. ಫಾ ಎಂ ಸಿ ಮಥಾಯಿ ಅಧ್ಯಕ್ಷತೆಯನ್ನು ವಹಿಸಿ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವಂತ ಶ್ರೀಯುತ ಸಕಾರಾಮ ಸೋಮಯಾಜಿ ಸ್ವಾಗತಿಸಿ ,ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗೆಸ್ ಪ್ರಸ್ತಾವಿಕ ನುಡಿಗಳನಾಡಿದರು ಧನ್ಯವಾದ ಸಮರ್ಪಣೆಯನ್ನು ಶ್ರೀಯುತ ಸಚಿನ್ ಪೂಜಾರಿ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಜ್ಯೋತಿ ಸಾಲಿಗ್ರಾಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅನಿತಾ ಫರ್ನಾಂಡಿಸ್ ನೆರವೇರಿಸಿದರು
No comments:
Post a Comment