ಎಸ್. ಎಂ. ಎಸ್ ಕಾಲೇಜು, ಬ್ರಹ್ಮಾವರ: ಯುವನಿಧಿ ನೋಂದಣಿ ಹಾಗೂ ಪ್ರಚಾರ ಅಭಿಯಾನ ಕಾರ್ಯಕ್ರಮ
ಬ್ರಹ್ಮಾವರ:ಇಲ್ಲಿನ ಎಸ್. ಎಮ್. ಎಸ್. ಕಾಲೇಜಿನಲ್ಲಿ ದಿನಾಂಕ 11-4-2025 ರಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರಜತಾದ್ರಿ ಮಣಿಪಾಲ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರ ಸಹಯೋಗದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರಾಡ್ರಿಗಸ್ ಜೆ. ಅವರ ಅಧ್ಯಕ್ಷತೆಯಲ್ಲಿ ಯುವನಿಧಿ ನೋಂದಣಿ ಹಾಗೂ ಪ್ರಚಾರ ಅಭಿಯಾನ ಕಾರ್ಯಕ್ರಮವು ನೆರವೇರಿತು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರಜಾತಾದ್ರಿ ಮಣಿಪಾಲ ಇವರ ವತಿಯಿಂದ ಶ್ರೀ ದೀಕ್ಷಿತ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ 'ಯುವನಿಧಿ' ಯೋಜನೆಯ ಉಪಯೋಗಗಳು, ನೋಂದಣಿಗೆ ಅರ್ಹತೆಗಳೇನು ಹಾಗೂ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಕುರಿತು, ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ವಿದ್ಯಾರ್ಥಿಗಳ ಹೆಸರುಗಳನ್ನು ನೋಂದಾಯಿಸಿಕೊಂಡರು. ಅಲ್ಲದೇ ಗ್ಯಾರಂಟಿ ಅನುಷ್ಠಾನ ಸಮಿತಿ, ಬ್ರಹ್ಮಾವರ ತಾಲ್ಲೂಕು,ಇದರ ವತಿಯಿಂದ ಶ್ರೀ ಅಬುಸಾಹೇಬ ಅವರು ಮಾತನಾಡಿ ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಕ್ಕೆ ಬಳಸಿಕೊಂಡು ಗುರಿಸಾಧಿಸಬೇಕು ಎಂದು ಹೇಳಿದರು. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುರೇಖಾ ವಂದಿಸಿ, ವಿದ್ಯಾರ್ಥಿನಿ ಕುಮಾರಿ ಐಶ್ವರ್ಯಲಕ್ಷ್ಮಿ ನಿರೂಪಿಸಿದರು.
No comments:
Post a Comment