ಬ್ರಹ್ಮಾವರದ ಸೇಂಟ್ ಮೇರಿಸ್ ಸಿರಿಯನ್ ಕಾಲೇಜಿನ ವಾರ್ಷಿಕೋತ್ಸವವು ದಿನಾಂಕ 13.05.2026 ರಂದು ಡಾ. ಬಿ.ವಿ. ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್‌ಕೆಪಿ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಂಪತ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸುತ್ತಾ, ಜೀವನದ ಯಶಸ್ಸಿಗಾಗಿ ನಿರಂತರ ಪ್ರಯತ್ನ ಪಡುವುದರ ಜೊತೆಗೆ ಸಮಯದ ಸದುಪಯೋಗ ಮತ್ತು ಹಣದ ಸದ್ಭಾಳಕೆ ಮಾಡುವ ಕೌಶಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾದ ಅನೂಪ್ ಹೆಗ್ಡೆ ಅವರು ಮಾತನಾಡಿ, ಇಂದಿನ ಆಧುನಿಕ ಜಗತ್ತು ವೇಗವಾಗಿ ಬದಲಾಗುತ್ತಿದೆ, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಜೀವನದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರೇರಣಾತ್ಮಕವಾಗಿ ಮಾತನಾಡಿದರು. ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಬಿ. ಸುಧಾಕರ್ ಕೋಟರಿ ಅವರು ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶೈಕ್ಷಣಿಕ ಜೀವನದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಟ್ಟರು.ಸಂಸ್ಥೆಯ ಸಂಚಾಲಕರಾದ ರೆ| ಫಾ| ಎಂ.ಸಿ. ಮಥಾಯ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಬರ್ಟ್ ರೋಡ್ರಿಗಸ್ ಇವರು ವಿಸ್ತ್ರತವಾದ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಈ ಕಾರ್ಯಕ್ರಮದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಬಿ. ಎ ಪದವಿಯಲ್ಲಿ 10ನೇ ರ್ಯಂಕ್ ವಿಜೇತೆಯಾದ ಫಾತಿಮಾ ಶಾಲುಲ ಎ.ಹೆಚ್, ನಿವೃತ್ತಿ ಹೊಂದಲಿರುವ ಕಚೇರಿ ಸಿಬ್ಬಂದಿಗಳಾದ ಶ್ರೀ ಎರಿಕ್ ರೋಚ್ ಶ್ರೀ ಭಾಸ್ಕರ್ ಶೆಟ್ಟಿಗಾರ್, ಪಿ.ಹೆಚ್‌ಡಿ ಪದವೀಧರರಾದ ಡಾ. ಭರತ್‌ರಾಜ್ ಮತ್ತು ಡಾ. ಪ್ರಶಾಂತ್ ಶೆಟ್ಟಿ, ಅತಿಥಿಗಳಾದ ಶ್ರೀ ಸಂಪತ್ ಶೆಟ್ಟಿ, ಶ್ರೀ ಅನೂಪ್ ಹೆಗ್ಡೆ ಮತ್ತು ಶ್ರೀ ಸುಧಾಕರ್ ಕೋಟರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕುಮಾರಿ ಸೃಷ್ಟಿ ತೃತೀಯ ಬಿ. ಕಾಮ್ ಇವರಿಗೆ 2025-26ನೇ ಸಾಲಿನ ಪ್ರವೀಣ್ ಶೆಟ್ಟಿ ಸ್ಮಾರಕ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಅದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಸನ್ನ ಶೆಟ್ಟಿ ಸ್ವಾಗತಿಸಿ, ಡಾ. ಮಂಜುನಾಥ್ ಉಡುಪ ವಂದನಾರ್ಪಣೆ ಮಾಡಿ, ವಿದ್ಯಾರ್ಥಿನಿಯರಾದ ಶ್ರೇಯ ಮತ್ತು ರೆಹಾನಾ ಕಾರ್ಯಕ್ರಮವನ್ನು ನಿರೂಪಿಸಿದರು.
No comments:
Post a Comment