⚡ Latest News ⚡

Upcoming Events : 🔥 🔴🔥Thillana 2026-Cultural Fest🔥 Commerce Fest ,IT Fest , Inter class Competitions ,Traditional Day,Council Day, College Day , Farewell,DJ Evening 🔥

Wednesday, May 20, 2026

46th Council Day Celebration

 ಬ್ರಹ್ಮಾವರದ ಸೇಂಟ್ ಮೇರಿಸ್ ಸಿರಿಯನ್ ಕಾಲೇಜು ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC)ಸಹಯೋಗದಿಂದಿಗೆ 46ನೇ ಕೌನ್ಸಿಲ್ ಡೇ' ವಿದ್ಯಾರ್ಥಿ ಕ್ಷೇಮಪಾಲನ ದಿನಾಚರಣೆಯು ಮೇ 12,2026ರ ಮಂಗಳವಾರದಂದು ಡಾ ಬಿ. ವಸಂತ ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು . 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಮತ್ತು ಸಮಾಜ ಸೇವಕರಾದ ಶ್ರೀ ಜೋಸೆಫ್ ಎಲಿಯಾಸ್ ಮೆನೆಜಸ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಪ್ರೇರಣಾದಾಯಕ ನುಡಿಗಳನ್ನಾಡುತ್ತಾ ತಮ್ಮ ಜೀವನದ ನೈಜ ಉದಾಹರಣೆಗಳನ್ನು ನೀಡಿ, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಒಬ್ಬ ವ್ಯಕ್ತಿಯು ಸಮಾಜದಲ್ಲಿ ಹೇಗೆ ಉನ್ನತ ಹಾಗೂ ಗೌರವಾನ್ವಿತ ಸ್ಥಾನಕ್ಕೆ ಏರಬಹುದು ಎಂಬುದನ್ನು ವಿವರಿಸಿದರು. ಅಲ್ಲದೆ, ಯಶಸ್ಸಿನ ಉತ್ತುಂಗಕ್ಕೇರಿದಾಗ ಸಮಾಜ ಸೇವೆಯ ಮೂಲಕ ಆಶಕ್ತರಿಗೆ ಸಹಾಯಹಸ್ತವನ್ನು ಚಾಚುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

 ಗೌರವ ಉಪಸ್ಥಿತಿತರು ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆದ ಶ್ರೀ ಸಂಜೀವ ಗುಂಡ್ಮಿ ಅವರು ಸಮಾಜದಲ್ಲಿ ಶಿಸ್ತುಬದ್ಧ ಜೀವನದ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲಿ ಕೇವಲ ಪಠ್ಯಕ್ಕೆ ಸೀಮಿತವಾಗದೆ, ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇಂತಹ ಸಕ್ರಿಯ ಪಾಲ್ಗೊಳ್ಳುವಿಕೆಯು ವಿದ್ಯಾರ್ಥಿಗಳನ್ನು ಯಶಸ್ಸಿನತ್ತ ಕೊಂಡೊಯ್ಯುವುದಲ್ಲದೆ, ಭವಿಷ್ಯದಲ್ಲಿ ಸುಸ್ಥಿರ ಹಾಗೂ ನೆಮ್ಮದಿಯ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಂ.ಎಸ್ ಕಾಲೇಜಿನ ಸಂಚಾಲಕರಾದ ರೆವರೆಂಡ್ ಫಾದರ್ ಎಂ.ಸಿ. ಮಥಾಯ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಕಾಲೇಜು ವಿಭಾಗದ ಕಾರ್ಯದರ್ಶಿಯಾದ ಶ್ರೀ ಅಲ್ವಾರಿಸ್ ಡಿಸಿಲ್ವಾ ಮತ್ತು ಖಜಾಂಚಿ ಶ್ರೀ ಜಾಯ್ಸನ್ ರೋಡ್ರಿಗಸ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಜೆ, ನಿರ್ದೇಶಕರಾದ ಡಾ. ಪ್ರಶಾಂತ್ ಶೆಟ್ಟಿ (ಪದವಿ ವಿಭಾಗ) ಮತ್ತು ಶ್ರೀಮತಿ ಪ್ರತಿಮಾ ಶೆಟ್ಟಿ (ಸ್ನಾತಕೋತ್ತರ ವಿಭಾಗ) ಹಾಗೂ ಉಪನಿರ್ದೇಶಕಿ ಶ್ರೀಮತಿ ಸುಪ್ರೀತಾ ಹಾಗೂ ಪದವಿ (U.G.) ಮತ್ತು ಸ್ನಾತಕೋತ್ತರ (P.G.) ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಪದಾಧಿಕಾರಿಗಳಾದ 

 ಪದವಿ ವಿಭಾಗದ ವಿಘ್ನೇಶ್ (ಅಧ್ಯಕ್ಷ), ಪವನ್ ಹಾಗೂ ಸೃಷ್ಟಿ (ಉಪಾಧ್ಯಕ್ಷ), ಸಿಂಚನ (ಕಾರ್ಯದರ್ಶಿ), ಮತ್ತು ಪ್ರಜ್ವಲ್ (ಜೊತೆ ಕಾರ್ಯದರ್ಶಿ).ಸ್ನಾತಕೋತ್ತರ ವಿಭಾಗ ಪ್ರತಿಕ್ಷಾ (ಅಧ್ಯಕ್ಷೆ) ಮತ್ತು ಇಮ್ರಾನ್ (ಕಾರ್ಯದರ್ಶಿ) ಉಪಸ್ಥಿತರಿದ್ದರು.

No comments:

46th Council Day Celebration