⚡ Latest News ⚡

Upcoming Events : 🔥 🔴🔥 Cooking with fire, Sports Day🔥

Wednesday, September 23, 2026

ಎಸ್ಎಂಎಸ್ ಕಾಲೇಜಿನಲ್ಲಿ ಹಿಂದಿ ದಿನಾಚರಣೆ

 ಎಸ್ಎಂಎಸ್ ಕಾಲೇಜಿನಲ್ಲಿ ಹಿಂದಿ ದಿನಾಚರಣೆ 


       ಬ್ರಹ್ಮಾವರ ದಿನಾಂಕ 23 / 9 /2026 ರಂದು ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ, ಇಲ್ಲಿ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯ ಕಾಲೇಜು, ಮುಲ್ಕಿ ಇಲ್ಲಿನ ಸಹಾಯಕ ಪ್ರಾಧ್ಯಾಪಕಿಯಾದ ಡಾ. ದೀಪಿಕಾ ಎಸ್ ಇವರು ಅಭ್ಯಾಗತರಾಗಿ ಆಗಮಿಸಿ ಪದವಿ ಹಂತದಲ್ಲಿ ಹಿಂದಿಯನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿದರೆ, ಸಿಗಬಹುದಾದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಹಿಂದಿ ದಿನದ ಮಹತ್ವವನ್ನು ತಿಳಿಸಿದರು. ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರಾಡ್ರಿಗಸ್ ಅವರು ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ಭಾಷೆಯ ಬಗ್ಗೆ ಕೀಳರಿಮೆ ಇಟ್ಟುಕೊಳ್ಳದೆ ಆಸಕ್ತಿಯಿಂದ ಹೆಚ್ಚು -ಹೆಚ್ಚು ಭಾಷೆಗಳನ್ನು ಕಲಿಯಬೇಕೆಂದು ಕಿವಿಮಾತು ಹೇಳಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಉಡುಪ ಕೆ. ಇವರು ಕಾರ್ಯಕ್ರಮವನ್ನು ಆಯೋಜಿಸುವುದರೊಂದಿಗೆ ಹಿಂದಿ ದಿನಾಚರಣೆ ಪ್ರಯುಕ್ತ ಪ್ರಾಸ್ತಾವಿಕ ಮಾತನಾಡಿದರು. ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಜ್ಯೋತಿ ಇವರು ಅಭ್ಯಾಗತರನ್ನು ಸ್ವಾಗತಿಸಿದರೆ ತೃತೀಯ ಬಿ.ಎ. ವಿದ್ಯಾರ್ಥಿನಿ ಕುಮಾರಿ ಸಹನಾ ಇವರು ವಂದಿಸಿದರು .ಕುಮಾರಿ ಅರ್ಚನಾ ಮತ್ತು ಕುಮಾರಿ ಮೆಹನಾಸ್ ಇವರು ಕಾರ್ಯಕ್ರಮ ನಿರೂಪಿಸಿದರೆ ಕುಮಾರಿ ಚಂದನ ಪ್ರಾರ್ಥಿಸಿದರು. 

             ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಂದಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಇದರಲ್ಲಿ ಕುಮಾರಿ ಅರ್ಚನಾ ಅಂತಿಮ ಬಿ.ಎ, ಕುಮಾರಿ ಮೆಹನಾಸ್ ಅಂತಿಮ ಬಿ.ಸಿ.ಎ ಮತ್ತು ಕುಮಾರಿ ಸಹನಾ ಅಂತಿಮ ಬಿ.ಎ. ಇವರು ಕ್ರಮವಾಗಿ ಪ್ರಥಮ ,ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.


No comments: