⚡ Latest News ⚡

Upcoming Events : "🔥 🔴 Placement Drive", "🟩 Traditional DAY", "💻 IT Fest", "📊 Commerce Fest", "🌍 Humanity Fest", "🚌 Study Tour", "✍️ Competitive Exam Training", "🏏 Inter Collegiate Cricket"

Monday, December 16, 2024

ಮಹಾಸಂಗಮ -2024

 ಮಹಾಸಂಗಮ -2024


ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಮಹಾಸಂಗಮ- 2024 ಡಿಸೆಂಬರ್ 15 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ  ವಿಜೃಂಭಣೆಯಿಂದ ನೆರವೇರಿತು   . ಕಾರ್ಯಕ್ರಮದಲ್ಲಿ  ಕಾಲೇಜನ್ನು ಕಟ್ಟುವಲ್ಲಿ ಸಹಕರಿಸಿದ   ಮಹನೀಯರಿಗೆ ಪ್ರಥಮ ಹಂತದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾದ ಪ್ರೊ.ಎಮ್ ಸಿ ನೈನಾನ್  ಹಾಗೂ ಶ್ರೀ ಬಾಲಕೃಷ್ಣ ಶೆಟ್ಟಿ  ಕಾರ್ಯಕ್ರಮಕ್ಕೆ  ಶುಭ ಕೋರಿದರು. ಈ ಸಂದರ್ಭದಲ್ಲಿ  ದುಬೈ,ಮುಂಬೈ, ಬೆಂಗಳೂರು ಹಾಗೂ ಅಂತರಾಷ್ಟ್ರೀಯ ಹಳೆ ವಿದ್ಯಾರ್ಥಿ ಸಂಘದ ಚಾಪ್ಟರ್ ಪ್ರಾರಂಭಿಸಲು ಮತ್ತು  ಅಸ್ತಿತ್ವದಲ್ಲಿರುವ ಸಂಘವನ್ನು ಸದೃಢ ಪಡಿಸಲು ನಿರ್ಧರಿಸಲಾಯಿತು. ಅನೇಕ ಹಳೆ ವಿದ್ಯಾರ್ಥಿಗಳು ಕಾಲೇಜಿಗೆ ಸ್ಮಾರ್ಟ್ ಕ್ಲಾಸ್ ,ಪ್ರೊಜೆಕ್ಟರ್ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಗೆ ,ಶುಲ್ಕ ಸಂಬಂಧಿತ ವಿಷಯಗಳಿಗೆ ಸಹಕರಿಸಲು ಮುಂದಾದರು . 




ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು  ಹಳೆ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.ಓ ಎಸ್ ಸಿ ಎಜುಕೇಶನ್ ಸೊಸೈಟಿ  ಬ್ರಹ್ಮಾವರದ ಸಂಚಾಲಕರಾದ ರೇ. ಫಾ ಎಂ ಸಿ  ಮಥಾಯಿ ಅಧ್ಯಕ್ಷತೆಯನ್ನು ವಹಿಸಿ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವಂತ ಶ್ರೀಯುತ  ಸಕಾರಾಮ ಸೋಮಯಾಜಿ ಸ್ವಾಗತಿಸಿ ,ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗೆಸ್ ಪ್ರಸ್ತಾವಿಕ ನುಡಿಗಳನಾಡಿದರು  ಧನ್ಯವಾದ ಸಮರ್ಪಣೆಯನ್ನು ಶ್ರೀಯುತ ಸಚಿನ್ ಪೂಜಾರಿ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಜ್ಯೋತಿ ಸಾಲಿಗ್ರಾಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅನಿತಾ ಫರ್ನಾಂಡಿಸ್ ನೆರವೇರಿಸಿದರು



































Sunday, December 1, 2024

SMS College Shines in ELC Taluk-Level Competitions

 SMS College Shines in ELC Taluk-Level Competitions



Brahmavar: Students of SMS College, Brahmavar, have excelled in the ELC Taluk-Level Competitions held in Brahmavar Taluk.

Ananya secured Third Place in the Poster Making competition, showcasing her creativity and artistic skills.

Aishwaryalakshmi and Fathima Shalula, both from III B.A., achieved First Place in the Quiz competition, demonstrating their exceptional knowledge and teamwork.

The management, principal, staff, alumni, PTA, and students congratulated the winners for their outstanding performance, bringing pride to the institution.


SMS College, Brahmavar Excels in Tulu Minadana Intercollegiate Cultural Fest

 SMS College, Brahmavar Excels in Tulu Minadana Intercollegiate Cultural Fest


The students of SMS College, Brahmavar, have made their institution proud by achieving outstanding success in the Tulu Minadana intercollegiate cultural fest.

The management, principal, faculty, alumni, PTA, and students of SMS College congratulated the winners for their excellent performance.

This success showcases the talents of the students and serves as an inspiration for future endeavors, enhancing the prestige of the institution.


Saturday, November 30, 2024

SMS College Brahmavar Shines at Mangalore University Athletic and Physique Competitions

SMS College Brahmavar Shines at Mangalore University Athletic and Physique Competitions




The students of SMS College, Brahmavar, have showcased their exceptional talents at the Mangalore University Inter-Collegiate Athletic Meet and Physique Competitions for 2024-25, bringing pride to their institution.

Mr. Gagan earned a Bronze medal in the Triple Jump event.

Mr. Thanush secured a Bronze medal in the Hammer Throw.

In the Best Physique Competition, Mr. Sumanth clinched the Gold medal in the 60kg category, while Mr. Tilak achieved a Bronze medal in the 65kg category.

The management, principal, staff, alumni, PTA, and students extended their heartfelt congratulations to the achievers for their dedication and hard work.


Inauguration of Parikrama Monthly Wall Magazine

 Inauguration of Parikrama Monthly Wall Magazine at SMS College, Brahmavara


On November 29, 2024, the Magazine Committee of SMS College, Brahmavara, proudly launched its monthly wall  magazine, Parikrama. The event was graced by the Principal Dr. Robert Rodrigues, who officially unveiled the magazine.


The Vice Principal, Mr. Prasanna Shetty, and Magazine Committee Convenor, were also present on the event, along with other distinguished committee members. 


The "Parikrama" will serve as a reflection of the college's dynamic environment, capturing the essence of its academic pursuits, cultural events, and community engagement.

MoU Exchange and Inaugural Ceremony for Add-On Courses Held at SMS College, Brahmavar

 

MoU Exchange and Inaugural Ceremony for Add-On Courses Held at 

SMS College, Brahmavar



SMS College, Brahmavar, hosted a significant event on November 21, 2024, by exchanging a Memorandum of Understanding (MoU) with IBM to introduce specialized add-on courses aimed at bridging the gap between academic learning and industry needs.

The event began with a prayer by Nagashree of III BCA, followed by a warm welcome by Mrs. Mallika Upadhyaya, Assistant Professor, Department of Commerce. The ceremonial lighting of the lamp was performed by Rev. Fr. MC Mathai, President of the Programme, alongside the Chief Guest, Mr. Jagadisha Bhat, Country Manager for Technology Expert Labs at IBM India Private Limited, and other dignitaries.


Mrs. Tweeny Maria Rodrigues, Convenor of Add-On Courses and Head of the Department of Commerce, elaborated on the objectives of the MoU, emphasizing its significance. Ms. Renuka, Assistant Professor from the M.Com Department, introduced the Chief Guest.

In his address, Mr. Jagadisha Bhat praised the college for its forward-thinking initiative, remarking, "These courses are the need of the hour and will prepare students to excel in their professional journeys."

The Principal, Dr. Robert Rodrigues, highlighted the institution's commitment to holistic education, while Rev. Fr. MC Mathai envisioned the transformative impact this partnership would have on students and faculty.


The event concluded with a vote of thanks by Mrs. Jayashree, Assistant Professor from the Department of English. Miss Nikitha of II B.Com A hosted the program, ensuring its smooth conduct.

This MoU signifies a strategic collaboration, offering value-added courses designed to equip students with certifications, practical skills, and a competitive edge in their careers, reinforcing SMS College’s dedication to excellence in education

Tuesday, November 26, 2024

ಕೊಂಕಣಿ ಅಸೋಸಿಯೇಶನ್ : ಗಾಳಿಪಟ ಸ್ಪರ್ಧೆ

 ಕೊಂಕಣಿ ಅಸೋಸಿಯೇಶನ್ : ಗಾಳಿಪಟ ಸ್ಪರ್ಧೆ


ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರ ಇಲ್ಲಿನ ಕೊಂಕಣಿ ಅಸೋಸಿಯೇಶನ್ ವತಿಯಿಂದ ಕಾಲೇಜಿನ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಎಲ್ಲಾ ಕೋರ್ಸ್ ನ ವಿದ್ಯಾರ್ಥಿಗಳಿಗೆ ಗಾಳಿಪಟ ರಚನೆ ಹಾಗೂ ಹಾರಿಸುವ ಸ್ಪರ್ಧೆಯನ್ನು 26/11/2024 ರಂದು ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಯಿತು. 


ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಹತ್ತು ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳ ಭಾಗವಹಿಸುವಿಕೆ ಹಾಗೂ ಕ್ರಿಯಾ ಸಾಮರ್ಥ್ಯ ಹೊರಸೂಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಅಸೋಸಿಯೇಷನ್ ನ ಸಂಯೋಜಕರಾದ ಶ್ರೀ ಜೂಡ್ ಆಲ್ಪ್ರೆಡ್ ಫುರ್ಟಾಡೊ ಹಾಗೂ ಶ್ರೀಮತಿ ಜ್ಯೋತಿ ಯವರು ಉಪಸ್ಥಿತರಿದ್ದರು.

ಎಸ್ಎಂಎ ಸ್ ಕಾಲೇಜಿನಲ್ಲಿ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ

 

ಎಸ್ಎಂಎ ಸ್ ಕಾಲೇಜಿನಲ್ಲಿ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ



ಎಸ್ ಎಂ ಎಸ್ ಕಾಲೇಜ್ ಬ್ರಹ್ಮಾವರ ಕುವೆಂಪು ಸಾಹಿತ್ಯ ಸಂಘ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕ  ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ರಾಬರ್ಟ್ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಾಹಿತ್ಯ ಸಂಘದ ಸಲಹೆಗಾರರಾದ ಡಾಕ್ಟರ್ ಮಂಜುನಾಥ ಉಡುಪ ಕಾರ್ಯಕ್ರಮದ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾಗದ ಉಪೇಂದ್ರ ಸೋಮ ಯಾಜಿ, ಸುರೇಶ ತುಂಗ, ಗುಂಡ್ಮಿ ರಾಮಚಂದ್ರ ಐತಾಳ್ ಕನ್ನಡ ನಾಡು ನುಡಿ ಬಗ್ಗೆ ಉಪನ್ಯಾಸ ನೀಡಿದರು.
ಕನ್ನಡ ನಮ್ಮ ತಾಯಿ, ನಮ್ಮ ತಾಯಿಗೆ ಬೆಲೆ ಕೊಡಿ, ಸ್ಥಾನ ಕೊಡಿ ಎಂದು ಕೇಳುವ ಮನಸ್ಥಿತಿಗೆ ನಾವು ಬರಬಾರದು, ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ ಅದು ನಮ್ಮ ಹೃದಯದ ಭಾಷೆಯಾಗಬೇಕು ಎಂದು ನುಡಿದರು. ಕುಮಾರಿ ಸಿಂಚನ ಪ್ರಾರ್ಥಿಸಿ, ಸಾಹಿತ್ಯ ಸಂಘದ ಕಾರ್ಯದರ್ಶಿ ಕುಮಾರಿ ಲಕ್ಷ್ಮಿ ವಂದಿಸಿದರು. ಕು. ಐಶ್ವರ್ಯ ಲಕ್ಷ್ಮಿ ನಿರೂಪಿಸಿದರು.

Thursday, November 21, 2024

Career Counselling Programme at Saint Mary's Syrian College, Brahmavara

 Career Counselling Programme at Saint Mary's Syrian College, Brahmavara


On 15th November 2024, Saint Mary's Syrian College, Brahmavara, hosted an insightful Career Counselling  program in collaboration with The First Phoenix . The event featured resource persons Mr.Alan Arjun D'Souza, Personality Develop Coach and Career Counsellor  and Mr. Samson Barnes, Founder and Owner of The First Phoenix  who provided valuable guidance to the students on various aspects of career development and skills and Personality.  The session was well-received, offering students practical tips and strategies for success in their academic and professional journeys. The event highlighted the understanding of skills and qualifications needed for different careers including foreign studies, foreign languages and jobs abroad.




Dr. Robert Rodrigues address the gathering and Rev. Fr. Lawrence D' Souza provided valuable guidance to students. Asha T.K HRD convenor and co- Convenor  Mr. Keerthi Shetttigar, Seema Lewis and Prakash Nayak were present in the Programme.

Wednesday, November 20, 2024

ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರದಲ್ಲಿ ಉಚಿತ ಸ್ತನ ಕ್ಯಾನ್ಸರ್ ಮತ್ತು ಗರ್ಭ ಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ

 ಸೈಂಟ್ ಮೇರಿಸ್ ಸಿರಿಯನ್  ಕಾಲೇಜು, ಬ್ರಹ್ಮಾವರದಲ್ಲಿ ಉಚಿತ  ಸ್ತನ  ಕ್ಯಾನ್ಸರ್    ಮತ್ತು ಗರ್ಭ  ಕಂಠದ ಕ್ಯಾನ್ಸರ್ ತಪಾಸಣಾ ಶಿಬಿರ







ಬ್ರಹ್ಮಾವರ: ಸೇಂಟ್ ಮೇರೀಸ್ ಸಿರಿಯನ್ ಕಾಲೇಜು (SMS), ಬ್ರಹ್ಮಾವರ, IQAC ,ಕೆ ಎಂ ಸಿ ಮಣಿಪಾಲ , ಇಂಡಿಯನ್  ಕ್ಯಾನ್ಸರ್ ಸೊಸೈಟಿ ಹಾಗೂ ವಿವಿಧ ಸಂಘಗಳ  ಸಹಯೋಗದಲ್ಲಿ  ನವೆಂಬರ್ 20, 2024, ಬುಧವಾರ, ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30 ರವರೆಗೆ ಉಚಿತ  ಸ್ತನ  ಕ್ಯಾನ್ಸರ್    ಮತ್ತು ಗರ್ಭ  ಕಂಠ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಕಾಲೇಜಿನಲ್ಲಿ  ಹಮ್ಮಿಕೊಳ್ಳಲಾಯಿತು . ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಓ.ಎಸ್.ಸಿ. ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರೆ. ಫಾ. ಎಂ.ಸಿ ಮಥೈ ಇವರು  ವಹಿಸಿದ್ದರು. ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಇಲ್ಲಿಯ ಸಹಾಯಕ ಪ್ರಾಧ್ಯಾಪಕರಾದ ಡಾ.ಅಖಿಲ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇದರ ವೈದ್ಯಕೀಯ ಸಮುದಾಯ ಕಾರ್ಯಕರ್ತರಾದ ಕು.ಸ್ವಾತಿ, ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಶ್ರೀ ಶ್ರೀಧರ್ ಶೆಟ್ಟಿ , ಲಯನ್ಸ್ & ಲಿಯೋ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇದರ ಅಧ್ಯಕ್ಷರಾದ ಶ್ರೀ ಜಯರಾಮ ನಾಯಕ್ , ಬಂಟರ ಯಾನೆ   ನಾಡವರ ಸಂಘ, (ರಿ.) ಬ್ರಹ್ಮಾವರ ಇದರ  ಅಧ್ಯಕ್ಷರಾದ ಶ್ರೀ ಸುದರ್ಶನ್ ಹೆಗ್ಡೆ , ಓಂಕಾರ ಸಂಜೀವಿನಿ - ಗ್ರಾಮ ಪಂಚಾಯತ್ ಲೆವೆಲ್ ಒಕ್ಕೂಟ, ವಾರಂಬಳ್ಳಿ ಇದರ ಅಧ್ಯಕ್ಷರಾದ ಶ್ರೀಮತಿ ಹೇಮ ಜಗನ್ನಾಥ್ ಪೂಜಾರಿ, ವಾರಂಬಳ್ಳಿ ಗ್ರಾಮ ಪಂಚಾಯತ್  ಅಧ್ಯಕ್ಷರಾದ ಶ್ರೀ ನಿತ್ಯಾನಂದ ಬಿ.ಆರ್,  ಅಂಬೇಡ್ಕರ್ ಯುವಕ ಮಂಡಲ (ರಿ.) ತೇಂಕು ಬಿರ್ತೀಯ ಅಧ್ಯಕ್ಷರಾದ ಶ್ರೀ ಹರೀಶ್,  ಬ್ರಹ್ಮಾವರ ಕೃಷಿ ಸೇವಾ ಸಹಕಾರಿ ಸಂಘ ನಿಯಮಿತ ಇದರ ನಿರ್ದೇಶಕರಾದ ಶ್ರೀ ಬಿರ್ತಿ ರಾಜೇಶ್ ಶೆಟ್ಟಿ , ಮಾರ್ತಾ ಮರಿಯಮ್ ಸಮಾಜ - ಎಸ್‌ಎಮ್‌ಎಸ್ ಕ್ಯಾಥೆಡ್ರಲ್ ಬ್ರಹ್ಮಾವರ ಇದರ  ಅಧ್ಯಕ್ಷರಾದ ಶ್ರೀಮತಿ ಆಶಾ ಅಲೆನ್ ವಾಜ್, ಗೈನ್ಟ್ ಗ್ರೂಪ್ ಬ್ರಹ್ಮಾವರ್ ಅದ್ಯಕ್ಷರಾದ ಶ್ರೀ ಸುಂದರ್ ಪೂಜಾರಿ , ಎಸ್.ಎಂ.ಎಸ್.ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಶ್ರೀ ಅಲ್ವರಿಸ್ ಡಿಸಿಲ್ವ , ಕಾಲೇಜಿನ ಪ್ರಾಂಶುಪಾಲರಾದ ಡಾ ರಾಬರ್ಟ್ ರೊಡ್ರಿಗಸ್ ಜೆ. ಉಪಪ್ರಾಂಶುಪಾಲ ಶ್ರೀ ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು



ಪ್ರಾಸ್ತಾವಿಕ ಭಾಷಣದಲ್ಲಿ ಡಾ. ರಾಬರ್ಟ್ ರೋಡ್ರಿಗಸ್, ಸೇಂಟ್ ಮೇರೀಸ್ ಸಿರಿಯನ್ ಕಾಲೇಜಿನ ಪ್ರಾಂಶುಪಾಲರು, ಶಿಬಿರದ ಮಹತ್ವವನ್ನು ಉಲ್ಲೇಖಿಸಿದರು. ನಂತರ, ಬಿರ್ತೀ ರಾಜೇಶ್ ಶೆಟ್ಟಿ ಅವರು ಶಿಬಿರವನ್ನು ಅಧಿಕೃತವಾಗಿ ಉದ್ಘಾಟಿಸಿದರು.


ಸಮುದಾಯ ವೈದ್ಯಕೀಯ ವಿಭಾಗ, ಕೆ ಎಂ ಸಿ ಮಣಿಪಾಲದ ಮುಖ್ಯಸ್ಥರಾದ ಡಾ ಅಶ್ವಿನಿ ಕುಮಾರ್ ಹಾಗೂ ಪ್ರಾಧ್ಯಾಪಕರಾದ ಡಾ ರಂಜಿತಾ ಶೆಟ್ಟಿಯವರ ನೇತೃತ್ವದಲ್ಲಿ ಡಾ ಅಖಿಲಾ ಅವರು ಮಹಿಳೆಯರಲ್ಲಿನ ಕ್ಯಾನ್ಸರ್ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿದರು ಮತ್ತು ಅವರ ತಂಡದಿಂದ ಕ್ಯಾನ್ಸರ್ ತಪಾಸಣೆಯನ್ನು ನಡೆಸಲಾಯಿತು.90 ಮಹಿಳೆಯರು ಈ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದರು.


ಪ್ರಶಾಂತ್ ಶೆಟ್ಟಿ ನಿರೂಪಿಸಿ,  ಭರತ್ ರಾಜ್ ಎಸ್. ನೇಜರ್ ಸ್ವಾಗತಿಸಿ, ಮತ್ತು ವಿಘ್ನೇಶ್ ಪಡಿಯಾರ್ ಅವರು ಧನ್ಯವಾದಗಳನ್ನು ಸಲ್ಲಿಸಿದರು.