ಕೊಂಕಣಿ ಅಸೋಸಿಯೇಶನ್ : ಗಾಳಿಪಟ ಸ್ಪರ್ಧೆ
ಸೈಂಟ್ ಮೇರಿಸ್ ಸಿರಿಯನ್ ಕಾಲೇಜು, ಬ್ರಹ್ಮಾವರ ಇಲ್ಲಿನ ಕೊಂಕಣಿ ಅಸೋಸಿಯೇಶನ್ ವತಿಯಿಂದ ಕಾಲೇಜಿನ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಎಲ್ಲಾ ಕೋರ್ಸ್ ನ ವಿದ್ಯಾರ್ಥಿಗಳಿಗೆ ಗಾಳಿಪಟ ರಚನೆ ಹಾಗೂ ಹಾರಿಸುವ ಸ್ಪರ್ಧೆಯನ್ನು 26/11/2024 ರಂದು ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಹತ್ತು ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳ ಭಾಗವಹಿಸುವಿಕೆ ಹಾಗೂ ಕ್ರಿಯಾ ಸಾಮರ್ಥ್ಯ ಹೊರಸೂಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಅಸೋಸಿಯೇಷನ್ ನ ಸಂಯೋಜಕರಾದ ಶ್ರೀ ಜೂಡ್ ಆಲ್ಪ್ರೆಡ್ ಫುರ್ಟಾಡೊ ಹಾಗೂ ಶ್ರೀಮತಿ ಜ್ಯೋತಿ ಯವರು ಉಪಸ್ಥಿತರಿದ್ದರು.
No comments:
Post a Comment