ಎಸ್ಎಂಎ ಸ್ ಕಾಲೇಜಿನಲ್ಲಿ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ
ಸಾಹಿತ್ಯ ಸಂಘದ ಸಲಹೆಗಾರರಾದ ಡಾಕ್ಟರ್ ಮಂಜುನಾಥ ಉಡುಪ ಕಾರ್ಯಕ್ರಮದ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾಗದ ಉಪೇಂದ್ರ ಸೋಮ ಯಾಜಿ, ಸುರೇಶ ತುಂಗ, ಗುಂಡ್ಮಿ ರಾಮಚಂದ್ರ ಐತಾಳ್ ಕನ್ನಡ ನಾಡು ನುಡಿ ಬಗ್ಗೆ ಉಪನ್ಯಾಸ ನೀಡಿದರು.
ಕನ್ನಡ ನಮ್ಮ ತಾಯಿ, ನಮ್ಮ ತಾಯಿಗೆ ಬೆಲೆ ಕೊಡಿ, ಸ್ಥಾನ ಕೊಡಿ ಎಂದು ಕೇಳುವ ಮನಸ್ಥಿತಿಗೆ ನಾವು ಬರಬಾರದು, ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ ಅದು ನಮ್ಮ ಹೃದಯದ ಭಾಷೆಯಾಗಬೇಕು ಎಂದು ನುಡಿದರು. ಕುಮಾರಿ ಸಿಂಚನ ಪ್ರಾರ್ಥಿಸಿ, ಸಾಹಿತ್ಯ ಸಂಘದ ಕಾರ್ಯದರ್ಶಿ ಕುಮಾರಿ ಲಕ್ಷ್ಮಿ ವಂದಿಸಿದರು. ಕು. ಐಶ್ವರ್ಯ ಲಕ್ಷ್ಮಿ ನಿರೂಪಿಸಿದರು.
No comments:
Post a Comment