-->

⚡ Latest News ⚡

Upcoming Events : 🔥 🔴 MAHA SANGAMA - Alumini Association 🟩 Semester Exam✍️ Competitive Exam Training

Friday, March 1, 2024

ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಸಂವಿಧಾನ ದಿನದ" ಅಂಗವಾಗಿ "ಜಾಥಾ"

 ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಸಂವಿಧಾನ ದಿನದ" ಅಂಗವಾಗಿ "ಜಾಥಾ"



ದಿನಾಂಕ:28/02/2024   2023-24 ರ ಸಾಲಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ "ಸಂವಿಧಾನ ದಿನದ" ಅಂಗವಾಗಿ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರದಲ್ಲಿ "ಜಾಥಾ" ಕಾರ್ಯಕ್ರಮವನ್ನು    ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಉಡುಪ ಕೆ. , ಎನ್.ಎಸ್.ಎಸ್. ಘಟಕಗಳ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಮತ್ತು ಶ್ರೀ  ಪ್ರಸನ್ನ ಶೆಟ್ಟಿ , ಸಹಯೋಜನಾಧಿಕಾರಿಗಳಾದ ಶ್ರೀ ಪ್ರಕಾಶ್ ಮತ್ತು ಸುಪ್ರೀತಾ , ಪ್ರಥಮ ಮತ್ತು ದ್ವಿತೀಯ ವರ್ಷದ ಎನ್.ಎಸ್.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು. ಕಾಲೇಜಿನಿಂದ  ಪ್ರಾರಂಭ ಗೊಂಡ ಜಾಥಾ ವಾರಂಬಳ್ಳಿ  ಗ್ರಾಮ ಪಂಚಾಯತ್ ವರೆಗೆ ಘೋಷ ವಾಕ್ಯಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತ ಸಾಗಿತು .  ಪಂಚಾಯತ್ ನಲ್ಲಿ "ಸಂವಿಧಾನದ ಪ್ರತಿಜ್ಞಾವಿಧಿಯನ್ನು" ಕೈಗೊಳಲಾಯ್ತು.

Sunday, January 7, 2024

Saint Mary's Syrian College Brahamavar hosts Inter-College Best physique Competition

 Saint Mary's Syrian College Brahamavar hosts Inter-College Best physique Competition 

In a spectacular display of strength and athleticism, the inter-college Best physique competition, hosted by SMS College Brahmavara in collaboration with the Department of Physical Education  Mangalore University, unfolded on January 7, 2024.



Alvas College Moodubidire secured the first place, followed by SDM College and Aloysius College . The host institution, SMS College, held its ground and secured a respectable fourth place.

A standout performer, Kishan Shetty of Alvas College, was crowned the best bodybuilder of the competition, showcasing exemplary dedication and physical prowess.

The event, held in the college hall of SMS College Brahmavara, not only celebrated the spirit of competition but also highlighted the commitment and hard work of the participating colleges and individual athletes. Congratulations to all participants for making the inter-college bodybuilding competition a resounding success.


ಎಸ್ ಎಮ್. ಎಸ್ ಕಾಲೇಜು ಬ್ರಹ್ಮಾವರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ ದೇಹದಾಢ್ಯ ಸ್ಪರ್ಧೆಯು ದಿನಾಂಕ 07.012024 ರಂದು ಕಾಲೇಜಿನ ಬಿ.ವಿ.ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ್ ಉಡುಪರವರು ವಹಿಸಿದ್ದರು. ಕೆ.ಎಫ್.ಎ. ಸರ್ಟಿಫೈಡ್ ಫಿಟ್‌ನೆಸ್ ತರಬೇತುದಾರರಾದ ಶ್ರೀ ನಿತ್ಯಾನಂದ ಕೋಟ್ಯಾನ್ ಹಾಗೂ ಬ್ರಹ್ಮಾವರ ತಾಲೂಕು ಅತ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಭರತ್ ಕುಮಾರ್ ಶೆಟ್ಟಿಯವರು  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ.ಹರಿದಾಸ್ ಕೂಳೂರು, ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಶ್ರೀ ಆಲ್ವರಿಸ್ ಡಿಸಿಲ್ವ, ಸದಸ್ಯರಾದ ಶ್ರೀ ಆಲ್ಬರ್ಟ್ ರೋನಿ ಡಿಸಿಲ್ವ, ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ರೆಫ್ರಿಯಾಗಿರುವ ಶ್ರೀ ಪ್ರೇಮನಾಥ್ ಉಳ್ಳಾಲ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರೊ.ಅಲ್ವಿನ್ ಅಂದ್ರಾದೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ಇವರು ಗೌರವ ಉಪಸ್ಥಿತಿಯಲ್ಲಿದ್ದರು.  ಉಪನ್ಯಾಸಕರಾದ ಶ್ರೀ ಭರತ್ ರಾಜ್ ನೇಜಾರ್ ಮತ್ತು ಶ್ರೀ ವಿಘ್ನೇಶ್ ಪಡಿಯಾರ್  ಸ್ವಾಗತಿಸಿ, ಶ್ರೀ ಅರುಣ್ ರಾಜ್ ಮತ್ತು ಶ್ರೀ ವೆಂಕಟೇಶ್ ಭಟ್  ರವರು ಧನ್ಯವಾದ ಸಮರ್ಪಿಸಿ, ಶ್ರೀ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕಾಲೇಜುಗಳ ಸುಮಾರು 50ಕ್ಕಿಂತಲೂ ಅಧಿಕ ದೇಹದಾಢ್ಯ ಪಟುಗಳು ಈ ಸ್ಪರ್ಧೆಯಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡು ಅಂತಿಮವಾಗಿ ಸ್ಪರ್ಧೆಯ ಸಮಗ್ರ ಪ್ರಶಸ್ತಿಯ 4  ನೇ  ಸ್ಥಾನವನ್ನು ಆತಿಥೇಯ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ , 3 ನೇ ಸ್ಥಾನ ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು , ದ್ವಿತೀಯ ಸ್ಥಾನವನ್ನು ಎಸ್ ಡಿ ಎಂ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು ಮಂಗಳೂರು, ಹಾಗೂ ಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರಿ ಪಡೆದುಕೊಂಡವು . Mr. ಮಂಗಳೂರು ಯೂನಿವರ್ಸಿಟಿ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಮೂಡಬಿದಿರೆಯ  ಕಿಶನ್ ಶೆಟ್ಟಿಯವರು ಸ್ಪರ್ಧೆಯ ಅತ್ಯುತ್ತಮ ದೇಹದಾಢ್ಯ ಪಟುವಾಗಿ  ಹೊರಹೊಮ್ಮಿದರು .



Tuesday, December 26, 2023

KFC ಪ್ರೀಮಿಯರ್ ಲೀಗ್: ಎಸ್ ಎಂ ಎಸ್ ವನಿತೆಯರು Runners up

KFC ಪ್ರೀಮಿಯರ್ ಲೀಗ್: ಎಸ್ ಎಂ ಎಸ್ ವನಿತೆಯರು Runners up

ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್, ಇವರ ಆಶ್ರಯದಲ್ಲಿ ಮಹಿಳೆಯರಿಗಾಗಿ ದಿನಾಂಕ 23 ಹಾಗೂ 24 ಡಿಸೆಂಬರ್ ರಂದು ನಡೆದ KFC ಪ್ರೀಮಿಯರ್ ಲೀಗ್  ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ  ಎಸ್ ಎಂ ಎಸ್  ಸಂಸ್ಥೆಯ ವಿದ್ಯಾರ್ಥಿನಿಯರು ಭಾಗವಹಿಸಿ ಅಮೋಘ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನವನ್ನು ಪಡೆದು, ಇಡೀ ಪಂದ್ಯಕೂಟದ ಅತ್ಯುತ್ತಮ ಶಿಸ್ತಿನ ತಂಡವೆಂದು ಗುರುತಿಸಿಕೊಂಡಿದೆ. 

Friday, December 22, 2023

ಹಳೆ ವಿದ್ಯಾರ್ಥಿಗಳಿಂದ ಕ್ರಿಕೆಟ್ ಪರಿಕರ ಕೊಡುಗೆ

 ಹಳೆ ವಿದ್ಯಾರ್ಥಿಗಳಿಂದ ಕ್ರಿಕೆಟ್ ಪರಿಕರ ಕೊಡುಗೆ


ದಿನಾಂಕ :22/12/23  ೨೦೨೩-೨೪ ನೇ ಸಾಲಿನಲ್ಲಿ ಎಸ್ ಎಂ ಎಸ್  ಬ್ರಹ್ಮಾವರದಲ್ಲಿ,ಯಶಸ್ವಿಯಾಗಿ  ನಡೆದ ವೆಟರನ್ ಟ್ರೋಫಿ-2023 ರ ಆಯೋಜಕರು ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಶ್ರೀ ಜನಾರ್ದನ್ ಎಂ ಟಿ , ಅಭಿಜೀತ್ ವೈ , ಸಚಿನ್ ಜಿ , ಸುಕೇಶ್ ಅಮೀನ್ ಪಂದ್ಯಕೂಟದ  ಉಳಿದ ಮೊತ್ತದಲ್ಲಿ ಕ್ರಿಕೆಟ್ ಪರಿಕರಗಳನ್ನು  ಕಾಲೇಜಿಗೆ ಕೊಡುಗೆ ನೀಡಿದರು . ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ .ಮಂಜುನಾಥ ಉಡುಪ ,ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ , ಕಚೇರಿ ಅಧೀಕ್ಷಕರಾದ ಶ್ರೀಮತಿ ಸೆಲಿನ್  ಬಾಂಝ್,ಉಪನ್ಯಾಸಕರಾದ ಶ್ರೀ ಅರುಣ್  ಕುಮಾರ್ ,ಶ್ರೀ ಭರತ್ ರಾಜ್ ಎಸ್ ನೇಜಾರ್ ಉಪಸ್ಥಿತರಿದ್ದರು .


The organisers of Veteran Trophy-2023, Mr. Janardhan MT, Abhijeet Y, Sachin G, and Sukesh Amin generously donated cricket equipment to the college from the remaining funds of the match. The event was graced by the presence of College Principal Dr. Manjunath Udupa, Physical Education Director Mr. Venkatesh Bhatt, Office Superintendent Mrs. Celine Banz, along with staffs Mr. Arun Kumar and Mr. Bharat Raj S. Nejar.

Monday, December 18, 2023

Celebrating Excellence: Governor's Award Conferred to Four Remarkable Individuals

 Celebrating Excellence: Governor's Award Conferred to Four Remarkable Individuals

The commendable efforts and unwavering dedication of Rover Kishan, Rover Shabareesha, Rover Rakshath, and Ranger Nidhi Shetty have resulted in a remarkable achievement. These exceptional individuals have been bestowed with the prestigious Governor Award for their successful clearance of the rigorous Rajya Purushkar examination, a testament to their commitment to the principles of Bharat Scouts and Guides.

Their achievement not only reflects their personal excellence but also stands as a beacon of inspiration within the scouting community, encouraging others to emulate their dedication and commitment. The Governor Award is a testament to their relentless pursuit of excellence and their embodiment of the core values upheld by Bharat Scouts and Guides.

Rover Kishan, Rover Shabareesha, Rover Rakshath, and Ranger Nidhi Shetty's achievement serves as a testament to the power of determination, teamwork, and perseverance, showcasing the heights that can be reached through dedication to the scout movement.

ಮಹಾಸಂಗಮ -2024