-->

⚡ Latest News ⚡

Upcoming Events : 🔥 🔴 MAHA SANGAMA - Alumini Association 🟩 Semester Exam✍️ Competitive Exam Training

Wednesday, September 27, 2023

ವಿಶ್ವ ಪ್ರವಾಸೋದ್ಯಮ ದಿನಾಚರಣೆ :ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು'

 

ವಿಶ್ವ ಪ್ರವಾಸೋದ್ಯಮ ದಿನಾಚರಣೆ :ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು' 

ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಉಡುಪಿ, ಪ್ರವಾಸೋದ್ಯಮ ಇಲಾಖೆ ಉಡುಪಿ ಇದರ ಆಶ್ರಯದಲ್ಲಿ ನಗರದ ಟೌನ್ ಹಾಲ್ ನಲ್ಲಿ  27.09.2023ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಜರುಗಿದ   'ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು' ಎಂಬ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಎಸ್.ಎಮ್.ಎಸ್. ಕಾಲೇಜು ಬ್ರಹ್ಮಾವರದ ಇತಿಹಾಸ ಮತ್ತು ಪುರಾತತ್ವ ವಿಭಾಗದ  ಅಂತಿಮ ಬಿ.ಎಯ 20 ವಿದ್ಯಾರ್ಥಿಗಳು ಪಾಲ್ಗೊಂಡು, ಕರಾವಳಿ ಭಾಗದ ಪ್ರವಾಸೋದ್ಯಮದ ಮಹತ್ವವನ್ನು ಹಾಗೂ ಸಾಂಸ್ಕೃತಿಕ ಪರಂಪರೆಯ ವಿಶೇಷತೆಗಳನ್ನು ತಿಳಿದುಕೊಂಡರು. 


ಹಾಗೆಯೇ ಕಾರ್ಯಕ್ರಮದ ತರುವಾಯ ವಿದ್ಯಾರ್ಥಿಗಳು ಉಡುಪಿಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ನಾಣ್ಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ನಾಣ್ಯಶಾಸ್ತ್ರಜ್ಞ  ಹಾಗೂ ಕ್ಯುರೇಟರ್ ಶ್ರೀಯುತ ಜಯಪ್ರಕಾಶ್ ರವರ ಮಾರ್ಗದರ್ಶನದಲ್ಲಿ ಭಾರತ ಹಾಗೂ ಅಂತರಾಷ್ಟ್ರೀಯ  ನಾಣ್ಯಗಳ ವಿಶೇಷತೆ ಮತ್ತು ಮಹತ್ವವನ್ನು ಅರಿತುಕೊಂಡರು.

Sunday, September 17, 2023

ಎನ್.ಎಸ್.ಎಸ್: "ಮಾಹಿತಿ ಕಾರ್ಯಗಾರ"

 

ಎನ್.ಎಸ್.ಎಸ್: "ಮಾಹಿತಿ ಕಾರ್ಯಗಾರ"


16/09/2023 ರ ಶನಿವಾರದಂದು ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2023-24 ರ ಸಾಲಿನ ಎನ್.ಎಸ್.ಎಸ್. ಘಟಕಗಳ "ಮಾಹಿತಿ ಕಾರ್ಯಗಾರ" ಕಾರ್ಯಕ್ರಮವನ್ನು  ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ. ಇವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಶ್ರೀ ಮಧುಸುದನ್ ದೇವಾಡಿಗ ಇವರು ಆಗಮಿಸಿ ಎನ್.ಎಸ್.ಎಸ್ ನಲ್ಲಿ ವ್ಯಕ್ತಿತ್ವ ವಿಕಸನದ ಬಗ್ಗೆ ಹಲವು ಮಾಹಿತಿಗಳನ್ನು ಹಾಗೂ ಎನ್. ಎಸ್. ಎಸ್. ನಲ್ಲಿ ತಮ್ಮ ಅನುಭವವನ್ನು ನಮ್ಮಲ್ಲಿ ಹಂಚಿಕೊಂಡರು. ಎನ್. ಎಸ್. ಎಸ್. ಘಟಕಗಳ ಯೋಜನಾಧಿಕಾರಿಗಳಾದ ಮಮತಾ ಮೇರಿ ಅಮ್ಮನಾ ಹಾಗೂ ಪ್ರಸನ್ನ ಶೆಟ್ಟಿ  ಮತ್ತು ಎನ್.ಎಸ್.ಎಸ್. ಘಟಕಗಳ ಸಹಯೋಜನಾಧಿಕಾರಿಗಳಾದ ಪ್ರಕಾಶ್ ನಾಯ್ಕ ಹಾಗೂ ಸುಪ್ರೀತಾ , ಹಾಗೆಯೇ ಕಾಲೇಜಿನ ಹಳೇವಿದ್ಯಾರ್ಥಿಗಳಾದ ಕಾರ್ತಿಕ್, ರಾಜೇಶ್ ಮತ್ತು ಸಮರ್ಥ್ ಇವರು ಉಪಸ್ಥಿತರಿದ್ದರು.



Saturday, September 16, 2023

Inauguration of Skill Development Certificate Courses

 Inauguration of Skill Development Certificate Courses

On 15/09/2023, the HRD Cell of the College in collaboration with Manipal Technologies Limited, inaugurated Skill Development Certificate Courses. The event was graced by the presence of Rev.Ft. MC Mathai,Dr. Mr. Manjunath Udupa K,principal of the College,Director of Learning Innovations and Content Darshan Patil, Imaging Department Manager, Mr. Madhuchandra Kothari, Secretary of OSC Educational Society (R) college section, Mr. Alwaris D'Silva, Tweeney Maria Rodrigues, HRD Cell Coordinator of the college, and the student secretaries of the HRD cell Nisarga B Shetty and Nandita Pai Teaching, non teaching staffs,Students were present on the occasion.The program was eloquently narrated by Aifa.



ದಿನಾಂಕ 15/09/2023ರಂದು ಎಸ್. ಎಂ. ಎಸ್ ಕಾಲೇಜು ಬ್ರಹ್ಮಾವರದ  HRD Cell ವತಿಯಿಂದ Manipal Technologies Limited ಇವರ ಸಹಯೋಗದೊಂದಿಗೆ ಕೌಶಲ್ಯಾಭಿವೃದ್ಧಿ ಕೋರ್ಸುಗಳ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾಗಿರುವ  ರೇ .ಫಾ .ಎಂ .ಸಿ ಮಥಾಯ್  ವಹಿಸಿದ್ದು, ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ, ಲರ್ನಿಂಗ್ ಇನ್ನೋವೇಷನ್ಸ್ ಆಂಡ್ ಕಂಟೆಂಟ್ ನಿರ್ದೇಶಕರಾಗಿರುವ ಶ್ರೀಯುತ. ದರ್ಶನ್ ಪಾಟೀಲ್ ಹಾಗೂ ಇಮೇಜಿಂಗ್ ವಿಭಾಗದ ಮ್ಯಾನೇಜರ್ ಆಗಿರುವ ಶ್ರೀಯುತ. ಮಧುಚಂದ್ರ ಕೊಠಾರಿ, ಓ ಎಸ್  ಸಿ ಎಜುಕೇಷನಲ್ ಸೊಸೈಟಿ (ರಿ  ) ಇದರ  ಕಾಲೇಜು ವಿಭಾಗದ ಕಾರ್ಯದರ್ಶಿಗಳಾದ ಶ್ರೀ ಅಲ್ವಾರಿಸ್ ಡಿ ಸಿಲ್ವಾ, ಕಾಲೇಜಿನ HRD Cell ಸಂಚಾಲಕಿಯಾಗಿರುವ ಟ್ವೀನಿ ಮರಿಯಾ ರೊಡ್ರಿಗಸ್ ಹಾಗೂ HRD ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿಗಳಾದ ನಿಸರ್ಗ ಬಿ ಶೆಟ್ಟಿ ಹಾಗೂ ನಂದಿತಾ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿಗಳನ್ನು ಸ್ವಾಗತಿಸಿ,  ವಂದಿಸಿದರು.  ಕಾಲೇಜಿನ ವಿದ್ಯಾರ್ಥಿನಿ  ಐಫಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.


Workshop on the Conservation of Medicinal Plants (ಔಷಧೀಯ ಸಸ್ಯಗಳ ಸಂರಕ್ಷಣೆಯ ಅರಿವು ಕಾರ್ಯಾಗಾರ)

 

Workshop on the Conservation of Medicinal Plants 


On the 15th of September 2023,  Workshop on the Conservation of Medicinal Plants took place in the SMSCollege Brahmavara.Workshop was organized by the Eco Club in collaboration with the NSS, NCC, Krishi Vigyan Kendra Brahmavar. Scientists from the horticulture department,  Dr. Raviraj Shetty, graced the occasion as the resource person.

Dr.Raviraj Shetty provided valuable insights into the various medicinal plants present in our environment. He also emphasized the crucial role that students can play in conserving these endangered medicinal plants. The workshop concluded with the inauguration of a Medicinal Flora initiative. In this endeavor, approximately 30 different varieties of medicinal plants were planted in the college environment.




 ಔಷಧೀಯ ಸಸ್ಯಗಳ ಸಂರಕ್ಷಣೆಯ ಅರಿವು  ಕಾರ್ಯಾಗಾರ

ಸ್ ಎಮ್ ಎಸ್ ಕಾಲೇಜು ಬ್ರಹ್ಮಾವರದ ಇಕೋ ಕ್ಲಬ್ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ  ಸಂಯುಕ್ತ ಆಶ್ರಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆಯ ಅರಿವು ಕಾರ್ಯಾಗಾರವು ದಿನಾಂಕ 15.09.2023 ರಂದು ಕಾಲೇಜಿನ ಕಿರು ಸಭಾಂಗಣದಲ್ಲಿ ನೆರವೇರಿತುಬ್ರಹ್ಮಾರವ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಭಾಗದ ವಿಜ್ಞಾನಿಗಳಾದ ಡಾರವಿರಾಜ್ ಶೆಟ್ಟಿಯವರು     ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ನಮ್ಮ ಪರಿಸರದಲ್ಲಿ ಇರುವ ಔಷಧೀಯ ಸಸ್ಯಗಳ ಕುರಿತು ಮಾಹಿತಿಯನ್ನು ನೀಡುತ್ತ ಅಳಿವಿನ ಅಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ಸಂರಕ್ಷಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಬೆಳಕು ಚೆಲ್ಲಿದರು, ನಂತರ ಕಾಲೇಜಿನ ಪರಿಸರದಲ್ಲಿ ಸುಮಾರು 30 ವಿಧದ ಔಷಧೀಯ ಸಸ್ಯಗಳನ್ನು ನೆಟ್ಟು ಔಷಧೀಯ ಸಸ್ಯವನವನ್ನು ಉದ್ಘಾಟಿಸಲಾಯಿತು


  ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಉಡುಪರವರು ವಹಿಸಿದ್ದರು. ಎನ್.ಸಿ.ಸಿ ಅಧಿಕಾರಿಯಾದ ಅಶ್ವಿನ್ ಶೆಟ್ಟಿ ಹಾಗೂ ಎನ್.ಎಸ್.ಎಸ್ ಯೋಜನಾಧಿಕಾರಿಯಾದ ಶ್ರೀಮತಿ ಮಮತಾ ಮೇರಿ ಅಮನ್ನಾರವರು ಉಪಸ್ಥಿತರಿದ್ದರು. ಎನ್ಎಸ್.ಎಸ್. ಸ್ವಯಂಸೇವಕರಾದ ದೀಕ್ಷಾ ಸ್ವಾಗತಿಸಿ,ಕಾರ್ತಿಕ್ ಅತಿಥಿಗಳನ್ನು ಪರಿಚಯಿಸಿ, ಶ್ರೀನಿಧಿ ಹಾಗೂ ಪ್ರತೀಕ್ ಕಾರ್ಯಕ್ರಮ ನಿರೂಪಿಸಿದರು.














ಮಹಾಸಂಗಮ -2024