ಅಂತರಾಷ್ಟ್ರೀಯ ಏಡ್ಸ್ ದಿನ: ಏಡ್ಸ್ ಅರಿವು ಕಾರ್ಯಾಗಾರ
04/12/2023 ರ ಗುರುವಾರದಂದು ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2023-24 ರ ಸಾಲಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ *"ಅಂತರಾಷ್ಟ್ರೀಯ ಏಡ್ಸ್ ದಿನ"ದ ಅಂಗವಾಗಿ ಏಡ್ಸ್ ನ ಬಗ್ಗೆ ಅರಿವು ಮೂಡಿಸುವ* ಕಾರ್ಯಕ್ರಮವನ್ನು ನಮ್ಮ ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ. ಇವರು ವಹಿಸಿಕೊಂಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಮೆಲಿಟ ಶೈಲಿನಿ ಸಹಾಯಕ ಪ್ರೊಪೆಸರ್ಸೆ ಲೆಕ್ಷನ್ ಗ್ರೇಡ್
ವೈದ್ಯಕೀಯ ಸರ್ಜಿಕಲ್ ನರ್ಸಿಂಗ್ ವಿಭಾಗ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್, ಹೈಯರ್ ಎಜುಕೇಶನ್, ಮಣಿಪಾಲ. ಇವರು ಆಗಮಿಸಿ ಎಚ್.ಐ.ವಿ. ಏಡ್ಸ್ ಹೇಗೆ ಹರಡುತ್ತದೆ, ಇದರ ಲಕ್ಷಣಗಳು ಮತ್ತು ಇದರಿಂದ ಆಗುವ ಪರಿಣಾಮಗಳನ್ನು ತಿಳಿಸಿಕೊಟ್ಟರು.
ಹಾಗೆಯೇ ಇವರ ಜೊತೆಗೆ ಸಹಾಯಕರಾಗಿ ಡೊಯ್ಲಿನ್ ಒಲಿವೀರ ಇವರು ಆಗಮಿಸಿದರು.ಎನ್.ಎಸ್.ಎಸ್. ಘಟಕಗಳ ಯೋಜನಾಧಿಕಾರಿಗಳಾದ ಮಮತಾ ಹಾಗೂ ಪ್ರಸನ್ನ ಶೆಟ್ಟಿ ಸಹಯೋಜನಾಧಿಕಾರಿಗಳಾದ ಸುಪ್ರಿತಾ ಮೇಡಂ ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವೃಂದದವರು, ನಮ್ಮ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ವರ್ಷದ ಎನ್.ಎಸ್.ಎಸ್.ಸ್ವಯಂ ಸೇವಕರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶ್ರೇಯಸ್, ಅತಿಥಿಯಾಗಿ ಆಗಮಿಸಿರುವ ಡಾ. ಮೆಲಿಟ ಶೈಲಿನಿ ಇವರ ಪರಿಚಯವನ್ನು ವಿದ್ಯಾ, ಧನ್ಯವಾದವನ್ನು ವರುಣ್ ಹಾಗೂ ನಿರೂಪಣೆಯನ್ನು ಆದಿತ್ಯ ಮತ್ತು ಚೈತ್ರಾ ಇವರು ನೆರವೇರಿಸಿಕೊಟ್ಟರು.
No comments:
Post a Comment