ಗ್ರಂಥಮಿತ್ರ " ಉದ್ಘಾಟನಾ ಕಾರ್ಯಕ್ರಮ
ದಿನಾಂಕ:- 16/12/2023 ರ ಶನಿವಾರದಂದು ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2023-24ರ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಉಡುಪಿ ತಾಲ್ಲೂಕು ಪಂಚಾಯತ್ ಯಿಂದ ಆಯೋಜಿಸಲಾದ " ಗ್ರಂಥಮಿತ್ರ " ಉದ್ಘಾಟನಾ ಕಾರ್ಯಕ್ರಮವನ್ನು ವಾರಂಬಳ್ಳಿ ಗ್ರಾಮ ಪಂಚಾಯತ್ ನ ಗ್ರಂಥಾಲಯದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನಕಾರರಾಗಿ ವಾರಂಬಳ್ಳಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಿಕ್ಷಣ ಸಂಯೋಜಿತೆಯಾದ ರೀಣಾ ಎಸ್.ಹೆಗ್ಡೆ ಅವರು ಆಗಮಿಸಿದ್ದರು. ಹಾಗೆಯೇ ತಾಲ್ಲೂಕು ಶಿಕ್ಷಣ ಸಂಯೋಜಿತೆಯಾದ ಶಿಲ್ಪ ,ಸರಕಾರಿ ಪ್ರೌಢಶಾಲೆ ಬ್ರಹ್ಮಾವರ ಇಲ್ಲಿಯ ಅಧ್ಯಾಪಕಿಯಾದ ಸುಶೀಲ ಎಸ್. , ಪಂಚಾಯತ್ ನ ಉಪಾಧ್ಯಕ್ಷರಾದ ಉಮಾಬಾಯಿ,ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ ಎನ್.ಎಸ್.ಎಸ್. ಘಟಕಗಳ ಯೋಜನಾಧಿಕಾರಿಗಳಾದ ಮಮತಾ ಮೇರಿ ಅಮ್ಮನ್ನ ಮತ್ತು ಪ್ರಸನ್ನ ಶೆಟ್ಟಿ ಅವರು ಆಗಮಿಸಿದ್ದರು. *ವಾರಂಬಳ್ಳಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್. ಅವರು ದೀಪವನ್ನು ಬೆಳಗುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು* . ಮಮತಾ ಮೇರಿ ಅಮ್ಮನ್ನ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಉದ್ಘಾಟನಕಾರರಾದ ನಿತ್ಯಾನಂದ ಬಿ.ಆರ್. ಅವರು ಗ್ರಂಥಮಿತ್ರ *"ಆಟದಿಂದ ಪಾಠ"* ಎಂಬ ಮಾತಿನೊಂದಿಗೆ ಗ್ರಂಥಾಲಯದಲ್ಲಿರುವ ಪುಸ್ತಕವನ್ನು ಹೆಚ್ಚಾಗಿ ಓದಿ *'ದೇಶ ಸುತ್ತಿ ನೋಡು ಕೋಶ ಓದಿ ನೋಡು'* ಎಂಬ ಗಾದೆ ಮಾತನ್ನು ಹೇಳಿದರು.ಸರಕಾರಿ ಪ್ರೌಢಶಾಲೆಯ ಅಧ್ಯಾಪಕಿಯಾದ ಸುಶೀಲಾ ಎಸ್. ಇವರು ಇತ್ತೀಚಿನ ದಿನಗಳಲ್ಲಿ ಮೊಬೈಲ್ ನ ಬಳಕೆ ಹೆಚ್ಚಾಗಿರುವುದರಿಂದ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುವುದಿಲ್ಲ ,ಗ್ರಂಥ ಮಿತ್ರ ಎಂಬ ಯೋಜನೆಯನ್ನು ಪಂಚಾಯತ್ ಗ್ರಂಥಾಲಯದಲ್ಲಿ ಆಯೋಜಿಸಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ ಎಂಬ ಮಾತುಗಳನ್ನು ಹೇಳಿದರು. ಹಾಗೆಯೇ ಮುಖ್ಯ ಅತಿಥಿಗಳಾದ ರೀಣಾ ಎಸ್. ಹೆಗ್ಡೆ ಅವರು ಆಧುನಿಕ ಗ್ರಂಥಾಲಯದ ಮಹತ್ವ ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂಬ ಮಾತುಗಳನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸಂಗೀತಾ, ಧನ್ಯವಾದವನ್ನು ಅಂಕಿತಾ ಹಾಗೂ ನಿರೂಪಣೆಯನ್ನು ಶಶಾಂಕ್ ಮತ್ತು ಸ್ನೇಹ ಇವರು ನೆರವೇರಿಸಿ ಕೊಟ್ಟರು.
No comments:
Post a Comment