ನಿತ್ಯ ಜೀವನದಲ್ಲಿ ಹಾಸ್ಯ
ಸೈಂಟ್ ಮೇರಿಸ್ ಸಿರಿಯನ್ ಕಾಲೇಜ್, ಬ್ರಹ್ಮಾವರ
ಕಾಲೇಜಿನ ಸಾಹಿತ್ಯ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಲಲಿತಾ ಕಲಾ ಸಂಘಗಳ ವತಿಯಿಂದ 'ನಿತ್ಯ ಜೀವನದಲ್ಲಿ ಹಾಸ್ಯ' ಎಂಬ ವಿಷಯದ ಕುರಿತು ಕಾರ್ಯಕ್ರಮವನ್ನು ದಿನಾಂಕ 6/12/2023 ರಂದು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು.
' ಮನು ಹಂದಾಡಿ' ಎಂದು ದೇಶ ವಿದೇಶಗಳಲ್ಲಿ ಜನಪ್ರಿಯರಾದ ಶ್ರೀ ಮನೋಹರ್ ಹೆಗ್ಡೆ ಹಂದಾಡಿ, ಬ್ರಹ್ಮಾವರ, ಉಡುಪಿ ಜಿಲ್ಲೆ ಇವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದು, ಹಲವಾರು ಜೀವನ ಮೌಲ್ಯಾಧಾರಿತ ವಿಷಯಗಳನ್ನು ಹಾಸ್ಯ ಚಟಾಕಿಗಳ ಮೂಲಕ ಹಂಚಿಕೊಂಡರು .
ಮನು ಹಂದಾಡಿ ಯವರು ತಮ್ಮ ಹಾಸ್ಯ ಭರಿತ ಕುಂದಾಪುರ ಕನ್ನಡ ಶೈಲಿಯ ವಾಕ್ಚಾತುರ್ಯದ ಮೂಲಕ ನೆರೆದಿರುವ ಎಲ್ಲರನ್ನು ನಗೆ ಕಡಲಲ್ಲಿ ತೇಲಿಸಿದರು.ಪ್ರತಿಯೊಬ್ಬರ ಜೀವನದಲ್ಲಿ ಹಾಸ್ಯ ಬೇಕು: ಆದರೆ ಜೀವನ ಹಾಸ್ಯಾಸ್ಪದ ವಾಗಬಾರದು ಎಂದು ಮನವರಿಕೆ ಮಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಹಾಸ್ಯ ಪ್ರತಿಯೊಬ್ಬರಿಗೂ ಮುದ,ಸಾಂತ್ವನ ಮತ್ತು ಸಮಾಧಾನಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮನು ಹಂದಾಡಿ ಯವರು ಪ್ರಶಂಸಾರ್ಹರು ಮತ್ತು ಈ ಒಂದು ಸಮಾಜಮುಖಿ ಕಾರ್ಯ ನಿರಂತರವಾಗಿ ಮುಂದುವರಿ ಯಲಿ ಎಂದು ಆಶಿಸಿದರು.
ಕಾರ್ತಿಕ್ ತೃತೀಯ ಬಿಕಾಂ ಪ್ರಾರ್ಥಿಸಿದರು, ಶ್ರೀನಿಧಿ ತೃತೀಯ ಬಿಕಾಂ ಸ್ವಾಗತಿಸಿದರು. ಫಾತಿಮಾ ದ್ವಿತೀಯ ಬಿ ಎ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಐಶ್ವರ್ಯ ಲಕ್ಷ್ಮಿ ದ್ವಿತೀಯ ಬಿಎ ಧನ್ಯವಾದ ಸಮರ್ಪಿಸಿದರು .
ಪ್ರತೀಕ್ ತೃತೀಯ ಬಿ ಸಿ ಎ ಮತ್ತು ಅರ್ಚನ ತೃತೀಯ ಬಿಕಾಂ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾಲೇಜಿನ ಉಪನ್ಯಾಸಕ- ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು . ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
—----------------------==---------------
No comments:
Post a Comment