⚡ Latest News ⚡

Upcoming Events : "🔥 🔴 Food Fest 🔥 Industrial Visits🔥 🔥 Orientation

Thursday, August 29, 2024

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಎಸ್ ಎಂ ಎಸ್ ಕಾಲೇಜು, ಬ್ರಹ್ಮಾವರದಲ್ಲಿ ರಕ್ತದಾನ ಶಿಬಿರ ಹಾಗೂ ವನಮಹೋತ್ಸವ ಕಾರ್ಯಕ್ರಮ

 ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಎಸ್ ಎಂ ಎಸ್  ಕಾಲೇಜು, ಬ್ರಹ್ಮಾವರದಲ್ಲಿ ರಕ್ತದಾನ ಶಿಬಿರ ಹಾಗೂ   ವನಮಹೋತ್ಸವ   ಕಾರ್ಯಕ್ರಮ


 ಬ್ರಹ್ಮಾವರ, 29 ಆಗಸ್ಟ್ 2024: ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುವ ಹಿನ್ನೆಲೆಯಲ್ಲಿ ಬ್ರಹ್ಮಾವರದ ಎಸ್ ಎಂ ಎಸ್  ಕಾಲೇಜು ವಿವಿಧ ಸಂಘ  ಸಂಸ್ಥೆಗಳ ಸಹಯೋಗದಲ್ಲಿ ಕಾಲೇಜಿನ  ಆಡಿಯೋರಿಯಂನಲ್ಲಿ ಬ್ರಹತ್  ರಕ್ತದಾನ ಶಿಬಿರ ಕಾರ್ಯಕ್ರಮವನ್ನು  ಆಯೋಜಿಸಿತು.

ಈ ಕಾರ್ಯಕ್ರಮವನ್ನು ಕಾಲೇಜಿನ IQAC , ವಿದ್ಯಾರ್ಥಿ ಕ್ಷೇಮಪಾಲನ ಸಂಘ  , ದೈಹಿಕ ಶಿಕ್ಷಣ ವಿಭಾಗ , NCC ,NSS ,Rovers rangers ,ಯೂಥ್ ರೇಡ್ ಕ್ರಾಸ್   , SMS ಕಾಲೇಜು ಹಳೆಯ ವಿದ್ಯಾರ್ಥಿ ಸಂಘ, ಶಿಕ್ಷಕರಕ್ಷಕ  ಸಂಘ  ಹಲವಾರು ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿತ್ತು. 




ಈ ಸಂದರ್ಭದಲ್ಲಿ ವಿಶ್ವವಿದ್ಯಾಯಲಯ ,ಅಂತರ್ ಕಾಲೇಜು ,ರಾಜ್ಯ ,ರಾಷ್ಟ್ರ ,ಅಂತರ್ ರಾಷ್ಟ್ರ ಮಟ್ಟದಲ್ಲಿ ಸಾಧನೆ ಗೈದ ಕಾಲೇಜಿನ  ಕ್ರೀಡಾ ಸಾಧಕರನ್ನು ಗುರುತಿಸಲಾಯಿತು  .ರಕ್ತ ದಾನ ಶಿಬಿರದಲ್ಲಿ  ಒಟ್ಟು 100 ಯುನಿಟ್ ರಕ್ತ  ಸಂಗ್ರಹಿಸಲಾಯಿತು .

 ಕಾರ್ಯಕ್ರಮದಲ್ಲಿ ರೆ .ಫಾ ಎಂ ಸಿ  ಮಥಾಯ್  ಅಧ್ಯಕ್ಷರು ಒ ಎಸ್ ಸಿ ಎಜುಕೇಶನ್ ಸೊಸೈಟಿ ,ಡಾ .ರಾಬರ್ಟ್ ರೊಡ್ರಿಗೆಸ್  ಪ್ರಾಂಶುಪಾಲರು , ಮುಖ್ಯ ಅತಿಥಿಗಳಾದ ರಾಜೇಶ್ ಶೆಟ್ಟಿ ಬಿರ್ತಿ, ಅಲೆನ್ ರೋಹನ್ ವಾಜ್   ಫೌಂಡೇಶನ್ ಡೈರೆಕ್ಟರ್   JCI ಇಂಡಿಯಾ, ಡಾ  .ಶಿವಾನಂದ ,ವೈದ್ಯರು ಕೆಎಂಸಿ ಬ್ಲಡ್ ಬ್ಯಾಂಕ್ ,ಡಾ .ಸಕಾರಾಮ ಸೋಮಯಾಜಿ ಅಧ್ಯಕ್ಷರು ಹಳೆ ವಿಧ್ಯಾರ್ಥಿ ಸಂಘ ,ಪ್ರವೀಣ್ ಶೆಟ್ಟಿ ಅದ್ಯಕ್ಷರು  ಶಿಕ್ಷಕ ರಕ್ಷಕ ಸಂಘ  ,ಮಿಲ್ಟನ್ ಒಲಿವೇರಾ ಎಸ್ ಎಂ ಎಸ್ ಕ್ಯಾಥೋಡ್ರಲ್ ,ರಾಘವೇಂದ್ರ ಕೆ ಹೆಚ್ ಮ್ಯಾನೇಜರ್ HDFC ಬ್ಯಾಂಕ್ ,ಜಯರಾಮ್ ನಾಯಕ್ ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕುರ್ ,ರೊಟೇರಿಯನ್ ಶ್ರೀಧರ್ ಶೆಟ್ಟಿ ರೋಟರಿ ಕ್ಲಬ್ ಬ್ರಹ್ಮಾವರ್ ,  ,ಜಯರಾಮ ಹೆಗಡೆ ರೇಡ್ ಕ್ರಾಸ್ ಉನಿಟ್ ಬ್ರಹ್ಮಾವರ ,ಭರತ್ ಶೆಟ್ಟಿ ಅದ್ಯಕ್ಷರು ಬ್ರಹ್ಮಾವರ ತಾಲೂಕ್ ಅಲ್ಥೆಟಿಕ್ ಅಸೋಸಿಯೇಷನ್ ,ಮಧುಸೂಧನ್ ಎಸ್ ಎಂ ಎಸ್ ಬ್ಯಾಡ್ಮಿಟನ್ ಫ್ರೆಂಡ್ಸ , ಸುಂದರ್ ಪೂಜರಿ ಗೈನ್ಟ್ ವೆಲ್ಫೇರ್ ಫೌಂಡೇಶನ್ ಬ್ರಹ್ಮಾವರ ,ಐವನ್ ಸುವರೀಸ್ ಪ್ರಾಂಶುಪಾಲರು ಎಸ್ ಎಂ ಎಸ್ ಪಿ ಯು ,ಪ್ರಸನ್ನ ಶೆಟ್ಟಿ ಉಪ ಪ್ರಾಂಶುಪಾಲರು ಎಸ್ ಎಂ ಎಸ್ ಕಾಲೇಜ್  ,ವಿವಿದ ಸಂಘದ ಪದಾಧಿಕಾರಿಗಳು ಉಪಸ್ತಿತರಿದ್ದರು .

No comments: