ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಉದ್ಘಾಟನಾ ಸಮಾರಂಭ
ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 20.08.2025. ರಂದು ಕಾಲೇಜಿನ ಡಾ. ಬಿ. ವಿ ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು. ಓ ಎಸ್ ಸಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರೆ. ಫಾ ಎಂ.ಸಿ. ಮಥಾಯಿ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರಿಯ ನಿರ್ವಾಹಕ ನಿರ್ದೇಶಕರಾದ ಶ್ರೀ ಸಂಪತ್ ಕುಮಾರ್ ಶೆಟ್ಟಿ ಇವರು ದೀಪ ಬೆಳಗಿಸಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ, ವಿದ್ಯಾರ್ಥಿಗಳ ಭವ್ಯ ಭವಿಷ್ಯವನ್ನು ನಿರ್ಮಿಸಲು ಹಾಗೂ ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಅವಶ್ಯಕವಿರುವ ಬದುಕಿನ 5 ಸೂತ್ರಗಳನ್ನು ಸೂಕ್ತ ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿ ಹೇಳಿದರು.
ಓ ಎಸ್ ಸಿ ಎಜುಕೇಶನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯಾದ ಶ್ರೀ ಅಲ್ವರಿಸ್ ಡಿಸಿಲ್ವ, ಕಾಲೇಜಿನ ಪ್ರಾಂಶುಪಾಲರಾದ ಡಾ ರಾಬರ್ಟ್ ರೊಡ್ರಿಗಸ್, ಉಪಪ್ರಾಂಶುಪಾಲರದ ಶ್ರೀ ಪ್ರಸನ್ನ ಶೆಟ್ಟಿ, ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಶ್ರೀ ಪ್ರಶಾಂತ್ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ, ಸಹನಿರ್ದೇಶಕಿಯಾದ ಕು. ಸುಪ್ರೀತಾ, ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಶ್ರೀ ಸಚಿನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಪುಷ್ಪ, ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಅಧ್ಯಕ್ಷರಾದ ವಿಘ್ನೇಶ್ ಪೈ, ಉಪಾಧ್ಯಕ್ಷರಾದ ಪವನ್ ಮತ್ತು ಸೃಷ್ಠಿ, ಕಾರ್ಯದರ್ಶಿಯಾದ ಸಿಂಚನ, ಉಪಕಾರ್ಯದರ್ಶಿಯಾದ ಪ್ರಜ್ವಲ್ ಎಸ್. ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಾದ ಪ್ರತೀಕ್ಷಾ, ಕಾರ್ಯದರ್ಶಿಯಾದ ಇಮ್ರಾನ್ ಉಪಸ್ಥಿತರಿದ್ದರು.






No comments:
Post a Comment