*ನಶಾ ಮುಕ್ತ ಭಾರತ*
ದಿನಾಂಕ 21/08/2025 ರ ಗುರುವಾರದಂದು, ಎಸ್.ಎಂ.ಎಸ್. ಕಾಲೇಜಿನ ಐ ಕ್ಯೂ. ಎ.ಸಿ. ಹಾಗೂ ಮಾದಕ ವ್ಯಸನ ವಿರೋಧಿ ಜಾಗೃತಿ ಸಂಘ ಮತ್ತು ಆ್ಯಂಟಿ ರಾಗಿಂಗ್ ಸೆಲ್ ನ ಸಂಯುಕ್ತ ಆಶ್ರಯದಲ್ಲಿ ನಶಾ ಮುಕ್ತ ಭಾರತ ಎನ್ನುವ ಶೀರ್ಷಿಕೆ ಅಡಿಯಲ್ಲಿ ಮಾದಕ ದ್ರವ್ಯಗಳ ವ್ಯಸನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಓ.ಎಸ್. ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೆ|| ಫಾ|| ಎಂ.ಸಿ ಮಥಾಯಿ ಇವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಪ್ರಕಾಶ್ ತೋಳಾರ್ ಶ್ರೀಮಾತಾ ಹಾಸ್ಪಿಟಲ್ ಕುಂದಾಪುರ, ಹಾಗೆಯೇ ಬ್ರಹ್ಮಾವರ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಗಿರುವ ವಿಠಲ್. ಎಂ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ|| ರೋಬರ್ಟ್ ರೋಡ್ರಿಗಸ್,ಉಪ ಪ್ರಾಂಶುಪಾಲರಾದ ಪ್ರಸನ್ನ ಶೆಟ್ಟಿ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘದ ಅಧ್ಯಕ್ಷನಾಗಿರುವ ವಿಘ್ನೇಶ್ ಇವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಪ್ರಕಾಶ್ ತೋಳರ್ ಹಾಗೂ ಶ್ರೀ ವಿಠಲ ಎಂ ಇವರು ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳು, ಅದರ ತಡೆಗಟ್ಟುವಿಕೆಯಲ್ಲಿ ಯುವ ಸಮುದಾಯದ ಪಾತ್ರ ಮತ್ತು ವಿದ್ಯಾರ್ಥಿಗಳೊಂದಿಗೆ ನೇರ ಸಂವಹನವನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಸನದ ಅರಿವನ್ನು ಜಾಗೃತಿಗೊಳಿ ಸುವುದರೊಂದಿಗೆ ನಶಾ ಮುಕ್ತ ಭಾರತದ ಕನಸನ್ನು ನನಸುಗೊಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಹೇಳಿದರು.
ಹಾಗೆಯೇ ವಿದ್ಯಾರ್ಥಿ ಸಂಘದ ಅಧ್ಯಕ್ಷನಾದ ವಿಫ್ನೇಶ್ ಇವರು ನಶಾ ಮುಕ್ತ ಭಾರತದ ಕುರಿತ
ಪ್ರಮಾಣವಚನವನ್ನು ಬೋಧಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಪಮ ಮತ್ತು ರೆಹನಾ ಸ್ವಾಗತವನ್ನು ಉಪ ಪ್ರಾಂಶುಪಾಲರಾದ ಶ್ರೀ ಪ್ರಸನ್ನ ಶೆಟ್ಟಿ , ಧನ್ಯವಾದವನ್ನು ಕನ್ನಡ ಉಪನ್ಯಾಸಕರಾದ ಡಾ||ವಿದ್ಯಾಲತಾ ಇವರು ನೆರವೇರಿಸಿ ಕೊಟ್ಟರು.

No comments:
Post a Comment