-->

⚡ Latest News ⚡

Upcoming Events : 🔥 🔴 MAHA SANGAMA - Alumini Association 🟩 Semester Exam✍️ Competitive Exam Training

Saturday, March 9, 2024

"ಕ್ಯಾನ್ಸರ್ ಅರಿವು " ಕಾರ್ಯಕ್ರಮ

 ಕ್ಯಾನ್ಸರ್ ಅರಿವು " ಕಾರ್ಯಕ್ರಮ


ದಿನಾಂಕ: 09/03/2024 ರ ಶನಿವಾದಂದು ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಇಲ್ಲಿಯ 2023-24 ರ ಸಾಲಿನ ಎನ್.ಎಸ್.ಎಸ್. ಘಟಕ ಮತ್ತು ಯುತ್ ರೆಡ್ ಕ್ರಾಸ್ ಇವರ ಸಹಯೋಗದಲ್ಲಿ *"ಕ್ಯಾನ್ಸರ್ ನ ಬಗ್ಗೆ ಅರಿವು ಮೂಡಿಸುವ"* ಕಾರ್ಯಕ್ರಮವನ್ನು   ಕಾಲೇಜಿನ  ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಉಡುಪ ಕೆ. ಇವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಡಾ. ಅನಂತ್. ಪೈ. ಪ್ರೊಫೆಸರ್, ವೈದ್ಯಕೀಯ ಆಂಕೊಲಜಿ ವಿಭಾಗ, ಕೆ.ಎಮ್.ಸಿ. ಮಣಿಪಾಲ, ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಅಂದರೆ ಏನು? ಅದು ಒಬ್ಬ ಮನುಷ್ಯನಲ್ಲಿ ಹೇಗೆ ಹಂತ ಹಂತವಾಗಿ ಕಂಡುಬರುತ್ತದೆ. ಇತ್ತೀಚೆಗೆ ನಾವು ಸೇವಿಸುವ ಆಹಾರ ಪದಾರ್ಥಗಳು ಹೇಗೆ ನಮ್ಮ ದೇಹದಲ್ಲಿ ಪರಿಣಾಮವನ್ನು ಉಂಟುಮಾಡಿ ಕ್ಯಾನ್ಸರ್ ಕಂಡುಬರುವುದನ್ನು ತಿಳಿಸಿ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆ ಬಂದಿದೆ ಎಂದು ತಿಳಿಸಿದರು. 

 ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಘಟಕಗಳ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಮತ್ತು ಶ್ರೀ  ಪ್ರಸನ್ನ ಶೆಟ್ಟಿ  ಸಹಯೋಜನಾಧಿಕಾರಿಗಳಾದ   ಕು . ಸುಪ್ರೀತಾ ಮತ್ತು ಯುತ್ ರೆಡ್ ಕ್ರಾಸ್ ನ ನಿರ್ದೇಶಕರಾದ. ಶ್ರೀ  ಆಲ್ಫ್ರೆಡ್ ಹಾಗೆಯೇ ಪ್ರಥಮ ಮತ್ತು ದ್ವಿತೀಯ ವರ್ಷದ ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಯುತ್ ರೆಡ್ ಕ್ರಾಸ್ ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು  ಶಿಲ್ಪ, ವ್ಯಕ್ತಿ ಪರಿಚಯವನ್ನು ಸ್ನೇಹ, ಧನ್ಯವಾದವನ್ನು ಯಜ್ನೇಶ್ ಮತ್ತು  ಸುದರ್ಶನ್ ಹಾಗೂ ವಿದ್ಯಾ ಇವರಿಂದ ಕಾರ್ಯಕ್ರಮ ನಿರೂಪಣೆಗೊಂಡಿತು.

Friday, March 1, 2024

Mangalore University Men's Cricket Team Selection Trials at Saint Mary's Syrian College

 Mangalore University Men's Cricket Team Selection Trials at Saint Mary's Syrian College


Date: February 29, 2024

In a bid to form a formidable cricket team, Mangalore University conducted rigorous selection trials on February 29, 2024, at Saint Mary's Syrian College, Brahamavar. The event was graced by the presence of Dr. Gerold Santhosh D'Souza, the Director of the Department of Physical Education at Mangalore University.





The selection committee, entrusted with the crucial task of identifying exceptional talent, comprised esteemed members: Dr. Jayaprakash, Dr. Eliyas Pinto, Mr. Sandeep Saliyan, and Mr. Venkatesh Bhat. Their collective expertise and keen eye for talent played a pivotal role in evaluating the aspiring cricketers vying for a spot on the university team.


The trials witnessed a display of skill, determination, and sportsmanship as participants showcased their prowess in various facets of the game. Dr. Gerold Santhosh D'Souza, expressing satisfaction with the overall talent pool, emphasized the university's commitment to fostering excellence in sports.


As the selection process unfolded, candidates underwent rigorous assessments, including batting, bowling, and fielding drills. The committee, after careful deliberation, is set to announce the final roster for the Mangalore University Men's Cricket Team in the coming days.


This initiative not only serves as a platform for budding cricketers to showcase their abilities but also reinforces the university's dedication to promoting sports and nurturing talent within its academic community. The selected players are expected to bring laurels to Mangalore University as they prepare to represent the institution in various cricket competitions.

ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಸಂವಿಧಾನ ದಿನದ" ಅಂಗವಾಗಿ "ಜಾಥಾ"

 ಸೈಂಟ್ ಮೇರಿಸ್ ಸೀರಿಯನ್ ಕಾಲೇಜು ಬ್ರಹ್ಮಾವರ ಸಂವಿಧಾನ ದಿನದ" ಅಂಗವಾಗಿ "ಜಾಥಾ"



ದಿನಾಂಕ:28/02/2024   2023-24 ರ ಸಾಲಿನ ಎನ್.ಎಸ್.ಎಸ್. ಘಟಕಗಳ ವತಿಯಿಂದ "ಸಂವಿಧಾನ ದಿನದ" ಅಂಗವಾಗಿ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರದಲ್ಲಿ "ಜಾಥಾ" ಕಾರ್ಯಕ್ರಮವನ್ನು    ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಉಡುಪ ಕೆ. , ಎನ್.ಎಸ್.ಎಸ್. ಘಟಕಗಳ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಮತ್ತು ಶ್ರೀ  ಪ್ರಸನ್ನ ಶೆಟ್ಟಿ , ಸಹಯೋಜನಾಧಿಕಾರಿಗಳಾದ ಶ್ರೀ ಪ್ರಕಾಶ್ ಮತ್ತು ಸುಪ್ರೀತಾ , ಪ್ರಥಮ ಮತ್ತು ದ್ವಿತೀಯ ವರ್ಷದ ಎನ್.ಎಸ್.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು. ಕಾಲೇಜಿನಿಂದ  ಪ್ರಾರಂಭ ಗೊಂಡ ಜಾಥಾ ವಾರಂಬಳ್ಳಿ  ಗ್ರಾಮ ಪಂಚಾಯತ್ ವರೆಗೆ ಘೋಷ ವಾಕ್ಯಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತ ಸಾಗಿತು .  ಪಂಚಾಯತ್ ನಲ್ಲಿ "ಸಂವಿಧಾನದ ಪ್ರತಿಜ್ಞಾವಿಧಿಯನ್ನು" ಕೈಗೊಳಲಾಯ್ತು.

Sunday, January 7, 2024

Saint Mary's Syrian College Brahamavar hosts Inter-College Best physique Competition

 Saint Mary's Syrian College Brahamavar hosts Inter-College Best physique Competition 

In a spectacular display of strength and athleticism, the inter-college Best physique competition, hosted by SMS College Brahmavara in collaboration with the Department of Physical Education  Mangalore University, unfolded on January 7, 2024.



Alvas College Moodubidire secured the first place, followed by SDM College and Aloysius College . The host institution, SMS College, held its ground and secured a respectable fourth place.

A standout performer, Kishan Shetty of Alvas College, was crowned the best bodybuilder of the competition, showcasing exemplary dedication and physical prowess.

The event, held in the college hall of SMS College Brahmavara, not only celebrated the spirit of competition but also highlighted the commitment and hard work of the participating colleges and individual athletes. Congratulations to all participants for making the inter-college bodybuilding competition a resounding success.


ಎಸ್ ಎಮ್. ಎಸ್ ಕಾಲೇಜು ಬ್ರಹ್ಮಾವರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ ದೇಹದಾಢ್ಯ ಸ್ಪರ್ಧೆಯು ದಿನಾಂಕ 07.012024 ರಂದು ಕಾಲೇಜಿನ ಬಿ.ವಿ.ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ್ ಉಡುಪರವರು ವಹಿಸಿದ್ದರು. ಕೆ.ಎಫ್.ಎ. ಸರ್ಟಿಫೈಡ್ ಫಿಟ್‌ನೆಸ್ ತರಬೇತುದಾರರಾದ ಶ್ರೀ ನಿತ್ಯಾನಂದ ಕೋಟ್ಯಾನ್ ಹಾಗೂ ಬ್ರಹ್ಮಾವರ ತಾಲೂಕು ಅತ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಭರತ್ ಕುಮಾರ್ ಶೆಟ್ಟಿಯವರು  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ.ಹರಿದಾಸ್ ಕೂಳೂರು, ಓ.ಎಸ್.ಸಿ ಎಜ್ಯುಕೇಷನಲ್ ಸೊಸೈಟಿಯ ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಶ್ರೀ ಆಲ್ವರಿಸ್ ಡಿಸಿಲ್ವ, ಸದಸ್ಯರಾದ ಶ್ರೀ ಆಲ್ಬರ್ಟ್ ರೋನಿ ಡಿಸಿಲ್ವ, ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ರೆಫ್ರಿಯಾಗಿರುವ ಶ್ರೀ ಪ್ರೇಮನಾಥ್ ಉಳ್ಳಾಲ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರೊ.ಅಲ್ವಿನ್ ಅಂದ್ರಾದೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ಇವರು ಗೌರವ ಉಪಸ್ಥಿತಿಯಲ್ಲಿದ್ದರು.  ಉಪನ್ಯಾಸಕರಾದ ಶ್ರೀ ಭರತ್ ರಾಜ್ ನೇಜಾರ್ ಮತ್ತು ಶ್ರೀ ವಿಘ್ನೇಶ್ ಪಡಿಯಾರ್  ಸ್ವಾಗತಿಸಿ, ಶ್ರೀ ಅರುಣ್ ರಾಜ್ ಮತ್ತು ಶ್ರೀ ವೆಂಕಟೇಶ್ ಭಟ್  ರವರು ಧನ್ಯವಾದ ಸಮರ್ಪಿಸಿ, ಶ್ರೀ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕಾಲೇಜುಗಳ ಸುಮಾರು 50ಕ್ಕಿಂತಲೂ ಅಧಿಕ ದೇಹದಾಢ್ಯ ಪಟುಗಳು ಈ ಸ್ಪರ್ಧೆಯಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡು ಅಂತಿಮವಾಗಿ ಸ್ಪರ್ಧೆಯ ಸಮಗ್ರ ಪ್ರಶಸ್ತಿಯ 4  ನೇ  ಸ್ಥಾನವನ್ನು ಆತಿಥೇಯ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ , 3 ನೇ ಸ್ಥಾನ ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು , ದ್ವಿತೀಯ ಸ್ಥಾನವನ್ನು ಎಸ್ ಡಿ ಎಂ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು ಮಂಗಳೂರು, ಹಾಗೂ ಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರಿ ಪಡೆದುಕೊಂಡವು . Mr. ಮಂಗಳೂರು ಯೂನಿವರ್ಸಿಟಿ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಮೂಡಬಿದಿರೆಯ  ಕಿಶನ್ ಶೆಟ್ಟಿಯವರು ಸ್ಪರ್ಧೆಯ ಅತ್ಯುತ್ತಮ ದೇಹದಾಢ್ಯ ಪಟುವಾಗಿ  ಹೊರಹೊಮ್ಮಿದರು .



Tuesday, December 26, 2023

KFC ಪ್ರೀಮಿಯರ್ ಲೀಗ್: ಎಸ್ ಎಂ ಎಸ್ ವನಿತೆಯರು Runners up

KFC ಪ್ರೀಮಿಯರ್ ಲೀಗ್: ಎಸ್ ಎಂ ಎಸ್ ವನಿತೆಯರು Runners up

ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್, ಇವರ ಆಶ್ರಯದಲ್ಲಿ ಮಹಿಳೆಯರಿಗಾಗಿ ದಿನಾಂಕ 23 ಹಾಗೂ 24 ಡಿಸೆಂಬರ್ ರಂದು ನಡೆದ KFC ಪ್ರೀಮಿಯರ್ ಲೀಗ್  ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ  ಎಸ್ ಎಂ ಎಸ್  ಸಂಸ್ಥೆಯ ವಿದ್ಯಾರ್ಥಿನಿಯರು ಭಾಗವಹಿಸಿ ಅಮೋಘ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನವನ್ನು ಪಡೆದು, ಇಡೀ ಪಂದ್ಯಕೂಟದ ಅತ್ಯುತ್ತಮ ಶಿಸ್ತಿನ ತಂಡವೆಂದು ಗುರುತಿಸಿಕೊಂಡಿದೆ. 

ಮಹಾಸಂಗಮ -2024