ಬ್ರಹ್ಮಾವರ - ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್ ಆರ್ ರಂಗನಾಥನ್ ರವರ ಜನ್ಮದಿನದ ಪ್ರಯುಕ್ತ ಇಲ್ಲಿನ ಎಸ್ ಎಂ ಎಸ್ ಕಾಲೇಜಿನಲ್ಲಿ ದಿನಾಂಕ 12-08-2025ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಜೆ. ದೀಪ ಬೆಳಗಿಸಿ ರಂಗನಾಥನ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಚೇರಿ ಅಧೀಕ್ಷಕಿ ಶ್ರೀಮತಿ ವಯಲೆಟಿನ್ ಲೂಯಿಸ್,ಐ ಕ್ಯೂ ಎ ಸಿ ಸಂಯೋಜಕರು ಅಶ್ವಿನ್ ಶೆಟ್ಟಿ ,ಉಪಪ್ರಾಂಶುಪಾಲ ಪ್ರಸನ್ನ ಶೆಟ್ಟಿ,ಬೋಧಕ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಂಥಾಪಾಲಕಿ ಶ್ರೀಮತಿ ಸುರೇಖಾ, ಗ್ರಂಥಾಲಯ ಸಹಾಯಕರಾದ ಶ್ರೀ ಸತೀಶ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.
Tuesday, August 12, 2025
ಎಸ್ ಎಂ ಎಸ್ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ
Subscribe to:
Post Comments (Atom)


No comments:
Post a Comment