ದಿನಾಂಕ 29/08/2023: ರಂದು ಎಸ್ ಎಂ ಎಸ್ ಕಾಲೇಜ್ ಬ್ರಹ್ಮಾವರದ ಧ್ಯಾನ್ ಚಂದ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು .ಇದರ ಪ್ರಯುಕ್ತ ಆರೋಗ್ಯಕರ ಜೀವನ ಶೈಲಿಯನ್ನು ಮೈಗೂಡಿಸುವ ಸಂದೇಶವನ್ನು ಸಾರುವ ನಿಲುವಿನಲ್ಲಿ ಮುಂಜಾನೆ ಫಿಟ್ ಇಂಡಿಯಾ ರನ್ ಆಯೋಜಿಸಲಾಗಿತ್ತು .
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ,ರಾಷ್ಟ್ರೀಯ ,ವಿಶ್ವವಿದ್ಯಾನಿಲಯ ,ಅಂತರ್ ಕಾಲೇಜು ಮಟ್ಟದಲ್ಲಿ ಪ್ರತಿನಿಧಿಸಿದ ಹಾಗೂ ವಿಜೇತರಾಗಿ ಕಾಲೇಜಿನ ಗರಿಮೆಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇ .ಫಾ .ಎಂ .ಸಿ ಮಥಾಯ್ ವಹಿಸಿದರು , ಕಾರ್ಯಕ್ರಮ ದಲ್ಲಿ ಓ ಎಸ್ ಸಿ ಎಜುಕೇಷನಲ್ ಸೊಸೈಟಿ (ರಿ ) ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಲೆನ್ ರೋಹನ್ vaz ,ಕಾಲೇಜು ವಿಭಾಗದ ಕಾರ್ಯದರ್ಶಿಗಳಾದ ಶ್ರೀ ಅಲ್ವಾರಿಸ್ ಡಿ ಸಿಲ್ವಾ , ಎಂ ಎಸ್ ಸ್ಪೊರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ನ ಸ್ಪೊರ್ಟ್ಸ್ ಸೆಕ್ರೆಟರಿ ಗಳಾದ ಶ್ರೀ ಹೆರಿಕ್ ಡಿ ಸೋಜ , ಪ್ರಾಂಶುಪಾಲರಾದ ಡಾ .ಮಂಜುನಾಥ ಉಡುಪ ,ಕಾಯ್ರಕ್ರಮದ ಆಯೋಜಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ್ ಭಟ್,ಉಪಪ್ರಾಂಶುಪಾಲರಾದ ಡಾ ವಿದ್ಯಾ ಲತಾ ,ಪ್ರೊ. ರಾಬರ್ಟ್ ರೊಡ್ರಿಗೆಸ್ ಉಪಸ್ತಿತರಿದ್ದರು . ಅರೋನ್ ರೋಚ್ ಸ್ವಾಗತಿಸಿ , ಪ್ರಶಸ್ತಿಪ್ರದಾನ ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀ ಭರತ್ ರಾಜ್ ಎಸ್ ನೇಜಾರ್ , ಶ್ರೀ ಪ್ರಶಾಂತ್ ದೇವಾಡಿಗ ,ಶ್ರೀ ಅಶ್ವಿನ್ ಶೆಟ್ಟಿ, ಶ್ರೀ ಅರುಣ್ ನೆರವೇರಿಸಿದರು .ಸಾಗರ್ ಧನ್ಯವಾದ ಸಮರ್ಪಿಸಿ,ಶ್ರೀ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮವನ್ನ ನಿರೂಪಿಸಿದರು
On August 29, 2023, the Dhyan Chand Sports Club of SMS College in Brahmavara celebrated National Sports Day by organizing a Fit India Run in the early morning. The event aimed to promote the message of adopting a healthy lifestyle.
During this celebration, the college recognized students who have excelled in sports at various levels, including international, national, university, and inter-college competitions, thus enhancing the college's prestige.
The program was presided over by Ray Fa. MC Mathai, with the presence of key figures including Mr. Allen Rohan Vaz and Mr. Alvaris de Silva, general secretaries of the OSC Educational Society (R), Mr. Herrick de Souza, Secretary of the College Department, and Dr. Manjunath Udupa, the Principal. Venkatesh Bhatt, the Director of Physical Education, Dr. Vidya Latha, the Vice Principal, and Prof. Robert Rodriguez were also in attendance.
Aron Roach extended a warm welcome, and the award ceremony was skillfully conducted by lecturers Mr. Bharat Raj S. Nejar, Mr. Prashant Devadiga, Mr. Ashwin Shetty, and Mr. Arun Sagar. The vote of thanks was delivered by Mr. Prashant Shetty, and Mr. Prashant Shetty narrated the program.